ಇಂಧೋರ್: ಜಾವ್ರಾ ಗ್ರಾಮದ ನಿವಾಸಿ ಷಹೀನ್ ಎಂಬ ಮಹಿಳೆ ಎರಡು ತಲೆ, ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಇಂಧೋರ್‌ನ ಮಹಾರಾಜ ಯಶವಂತ ರಾವ್ ಆಸ್ಪತ್ರೆಯಲ್ಲಿ ಸದ್ಯ ತಾಯಿ ಮತ್ತು ಮಗು ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಹೆರಿಗೆಗೂ ಮೊದಲು ಷಹೀನ್ ಸೋನೊಗ್ರಫಿ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಅವಳಿ ಮಕ್ಕಳಿವೆ ಎಂದು ವೈದ್ಯರು ಹೇಳಿದ್ದರು. ಆದರೆ, ಆಪರೇಷನ್ ಮಾಡಿದಾಗ ಹೊಟ್ಟೆಯಲ್ಲಿ ಎರಡು ತಲೆ, ಮೂರು ಕೈಗಳಿರುವ ಮಗು ಇರುವುದನ್ನು ನೋಡಿ ವೈದ್ಯರೇ ಅಚ್ಚರಿಯಾಗಿದ್ದಾರೆ. ಮಗುವಿನ ತಲೆಯ ಹಿಂಬದಿಯಲ್ಲಿ ಮೂರನೇ ಕೈ ಇದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸದ್ಯ ವಿಚಿತ್ರವಾಗಿ ಜನಿಸಿರುವ ಮಗುವನ್ನು ವಿಶೇಷ ಮಕ್ಕಳ ನವಜಾತ ಶಿಶುವಿನ ಆರೈಕೆ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರೀತಿ ವಿಚಿತ್ರವಾಗಿ ಜನಿಸಿದ ಮಕ್ಕಳು ಸಾಮಾನ್ಯವಾಗಿ ಗರ್ಭದಲ್ಲೇ ಸಾಯುತ್ತವೆ. ಅಥವಾ ಹುಟ್ಟಿದ 48 ಗಂಟೆಗಳಲ್ಲೇ ಸಾಯುತ್ತವೆ. ಸರ್ಜರಿ ಮಾಡಿದರೂ ಕೂಡ ಶೇಕಡಾ 60-70 ಮಕ್ಕಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಆಸ್ಪತ್ರೆ ವೈದ್ಯ ಡಾ. ನವೀದ್ ಖುರೇಷಿ ತಿಳಿಸಿದ್ದಾರೆ.