ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನಲ್ಲಿ ಮಾತನಾಡುತ್ತಿದ್ದಾರೆ. ಇದು ಅವರು ನಡೆಸಿಕೊಡುತ್ತಿರುವ 99ನೇ ಆವೃತ್ತಿಯ ಮನ್ ಕೀ ಬಾತ್ ಆಗಿದೆ. 2014ರ ಅಕ್ಟೋಬರ್ 3ರಂದು ಅಂದರೆ ವಿಜಯದಶಮಿಯಿಂದ ಪ್ರಾರಂಭವಾದ ಈ ವಿನೂತನ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಚಾಚೂತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಇಂದಿನ ಮನ್ ಕೀ ಬಾತ್ ಸಮಗ್ರ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಸೂರ್ಯೋಪಾಸನೆ ಪರಂಪರೆಯಿಂದ ಬಂದಿದೆ. ಈಗ ದೇಶವಾಸಿಗಳು ಸೋಲಾರ್ ವಿದ್ಯುತ್ ಬಳಕೆಯ ಮಹತ್ವವನ್ನು ಮನಗಾಣುತ್ತಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಎಂಎಸ್ ಆರ್ ಆಲಿವ್ ಹೌಸಿಂಗ್ ಸೊಸೈಟಿಯ ನಿವಾಸಿಗಳು ಸಂಪೂರ್ಣ ಸೌರಶಕ್ತಿಯನ್ನು ಬಳಸುತ್ತಿದ್ದಾರೆ. ಇಲ್ಲಿನ ಸೋಲಾರ್ ಘಟಕದಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರತಿ ತಿಂಗಳು 40,000 ರೂ. ವಿದ್ಯುತ್ ಬಿಲ್ ಉಳಿತಾಯ ಮಾಡುತ್ತಿದ್ದಾರೆ.
ಏಷ್ಯಾದ ಮೊದಲ ಲೋಕೋ ಪೈಲಟ್ ಆಗಿ ಮಹಾರಾಷ್ಟ್ರದ ಸುರೇಖಾ ಯಾದವ್ ಅವರು ಇತಿಹಾಸ ನಿರ್ಮಿಸಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊದಲ ಮಹಿಳಾ ಲೋಕೊ ಪೈಲಟ್ ಆಗಿ ಮಾದರಿಯಾಗಿದ್ದಾರೆ.
ಅಂಗಾಂಗ ದಾನವನ್ನು ಉತ್ತೇಜಿಸಲು ದೇಶಾದ್ಯಂತ ಏಕರೂಪದ ನೀತಿಯನ್ನು ಜಾರಿಗೊಳಿಸಿದೆ. ದೊಡ್ಡ ಸಂಖ್ಯೆಯಲ್ಲಿ ಅಂಗಾಂಗ ದಾನಿಗಳು ಮುಂದೆ ಬರಬೇಕಿದೆ. ಇದರಿಂದ ಅನೇಕ ಮಂದಿಯ ಜೀವ ರಕ್ಷಣೆಯೂ ಸಾಧ್ಯ
ಜಾರ್ಖಂಡ್‌ನ ಅಭಿಜಿತ್ ಅವರ ತಾಯಿ ಬ್ರೈನ್ ಡೆತ್‌ಗೆ ಒಳಗಾದ ಸಂದರ್ಭ ಅವರ ಕುಟುಂಬವು ಅಂಗಾಂಗ ದಾನಕ್ಕೆ ನಿರ್ಧರಿಸಿತು. ಈ ಹಿಂದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ತಾಯಿ ಅವರು ಕೊನೆಯುಸಿರೆಳೆದ ಸಂದರ್ಭ ಕುಟುಂಬವು ಕೈಗೊಂಡ ನಿರ್ಣಯ ಆದರ್ಶಯುತ ಹಾಗೂ ಪವಿತ್ರ ಕಾರ್ಯ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ದೇಶದಲ್ಲಿ ಅಂಗಾಂಗ ಮತ್ತು ದೇಹದಾನದ ಬಗ್ಗೆ ಜನ ಜಾಗೃತಿಯ ಅವಶ್ಯಕತೆ ಇದೆ.