ಶ್ರೀನಗರ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಝಜ್ಜರ್ ಕೊಟ್ಲಿ ಸಮೀಪ ಬಸ್ ಪಲ್ಟಿಯಾಗಿದ್ದು (Bus Fell into a Gorge), 10 ಜನರು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 75 ಪ್ರಯಾಣಿಕರನ್ನು ಹೊತ್ತ ಬಸ್, ಪಂಜಾಬ್ನ ಅಮೃತ್ಸರ್ದಿಂದ ಕಾತ್ರಾಕ್ಕೆ ಹೋಗುತ್ತಿತ್ತು. ಕೊಟ್ಲಿ ಬಳಿ ಈ ಬಸ್ ಕಂದಕಕ್ಕೆ ಉರುಳಿಬಿದ್ದಿದೆ. ಸೇತುವೆ ಮೇಲಿಂದ ಬಿದ್ದಿದ್ದು, ಬಸ್ ಜಖಂ ಆಗಿದೆ. ಕಾತ್ರಾಕ್ಕೆ ಹೊರಟಿದ್ದ ಈ ಬಸ್ನಲ್ಲಿ ಅನೇಕರು ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲಿದ್ದ ಭಕ್ತರೇ ಇದ್ದರು. ಬಹುತೇಕರು ಬಿಹಾರದವರು ಇದ್ದರು. ಆದರೆ ಕಾತ್ರಾ ಇರುವ ರಿಯಾಸಿ ಜಿಲ್ಲೆಯಿಂದ 15 ಕಿಮೀ ದೂರದಲ್ಲಿ, ಕೋಟ್ಲಿ ಬಳಿ ಅಪಘಾತಕ್ಕೀಡಾಗಿದೆ.
#WATCH | J&K | A bus from Amritsar to Katra fell into a gorge in Jammu. As per Jammu DC, 7 peopled died and 4 critically injured; 12 others also sustained injuries.
— ANI (@ANI) May 30, 2023
Visuals from the spot. pic.twitter.com/iSse58ovos
ಮೇ 29ರಂದು ಮೈಸೂರಿನ ಕೊಳ್ಳೇಗಾಲ-ಟಿ.ನರಸಿಪುರ ಹೆದ್ದಾರಿಯಲ್ಲಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತವಾಗಿ ಒಂದೇ ಕುಟುಂಬದ 9 ಮಂದಿ ಮತ್ತು ಚಾಲಕ ಮೃತಪಟ್ಟಿದ್ದಾರೆ. ಮೂಲತಃ ಬಳ್ಳಾರಿಯವರಾದ ಇವರು ಪ್ರವಾಸಕ್ಕೆಂದು ಮೈಸೂರಿನ ಕಡೆಗೆ ಬಂದಿದ್ದರು. ತಮ್ಮ ಊರಿನಿಂದ ರೈಲಿನಲ್ಲಿ ಬಂದಿದ್ದವರು, ಇಲ್ಲಿ ಬಾಡಿಗೆ ಕಾರು ಮಾಡಿಸಿಕೊಂಡು ಹಲವು ಪ್ರದೇಶಗಳನ್ನು ಸುತ್ತುತ್ತಿದ್ದರು. ನಿನ್ನೆ ಅವರ ಬಾಡಿಗೆ ಕಾರು ಖಾಸಗಿ ಬಸ್ಗೆ ಡಿಕ್ಕಿಯಾಗಿದೆ. ಅಪಘಾತದ ಭೀಕರತೆ ಅದೆಷ್ಟಿತ್ತು ಅಂದರೆ, ಕಾರಿನಲ್ಲಿ ಇದ್ದ ಹಲವರು ಜಜ್ಜಿ ಹೋಗಿದ್ದರು.