ಬೆಂಗಳೂರು : ಬೆಂಗಳೂರಿನಿಂದ 130 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಗೋ ಏರ್ ಸಂಸ್ಥೆಗೆ ಸೇರಿದ ವಿಮಾನಕ್ಕೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಹಕ್ಕಿಗಳ ಗುಂಪು ಡಿಕ್ಕಿ ಹೊಡೆದ (bird stirke) ಕಾರಣ ಆತಂಕ ಎದುರಾಯಿತು. ಪೈಲಟ್ ಸಮಯಪ್ರಜ್ಞೆ ಬಳಸಿ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.
ಗೋ ಏರ್ ಸಂಸ್ಥೆಯ ಜಿ8 274 ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಹಕ್ಕಿಗಳ ಹಿಂಡು ಏಕಾಏಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲು ಮಾಂಸ ಮಾರಾಟದ ಅಂಗಡಿಗಳಿವೆ. ಅಲ್ಲಿಗೆ ಬರುವ ಹಕ್ಕಿಗಳು ವಿಮಾನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿವೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಸಮಸ್ಯೆ
ವಿಮಾನ ಭೂಮಿಗೆ ಸನಿಹ ಇರುವಾಗ ಹಕ್ಕಿಗಳಿಂದ ಅಡಚನೆ ಎದುರಿಸುವುದು ಸರ್ವೆ ಸಾಮಾನ್ಯ. ಲ್ಯಾಂಡಿಂಗ್ ಅಥವಾ ಟೇಕ್ಆಫ್ ಸಮಯದಲ್ಲಿ ಈ ಸಮಸ್ಯೆ ಹಚ್ಚು. ಗುಂಪಾಗಿ ಹಾರುವ ಹಕ್ಕಿಗಳು ವಿಮಾನಕ್ಕೆ ಬಡಿದಾಗ ವಿಂಡ್ ಸ್ಕ್ರೀನ್, ಎಂಜಿನ್ ಮತ್ತು ನೋಸ್ ಕೋನ್ ಹಾನಿಗೆ ಒಳಗಾಗುತ್ತವೆ. ಅಲ್ಲದೆ, ವಿಂಡ್ ಸ್ಕ್ರೀನ್ಗೆ ಏಕಾಏಕಿ ಬಡಿದಾಗ ಪೈಲೆಟ್ ತಲ್ಲಣಗೊಳ್ಳುವ ಕಾರಣ ನಿಯಂತ್ರಣ ತಪ್ಪುವ ಸಾಧ್ಯತೆಗಳೂ ಇರುತ್ತವೆ.
ಇದನ್ನೂ ಓದಿ | Indigo Flight | ತಾಂತ್ರಿಕ ಸಮಸ್ಯೆಯಿಂದ ತಿಂಗಳಿನಲ್ಲಿ 2ನೇ ಬಾರಿಗೆ ಕರಾಚಿಯಲ್ಲಿಳಿದ ಭಾರತದ ವಿಮಾನ