Site icon Vistara News

ಒಂದೇ ಸಿರಿಂಜ್​​ನಿಂದ ಹಲವು ಮಕ್ಕಳಿಗೆ ಇಂಜೆಕ್ಷನ್​ ಮಾಡಿದ ವೈದ್ಯ; ಎಚ್​ಐವಿ ಸೋಂಕಿಗೆ ತುತ್ತಾದ ಬಾಲಕಿಯ ಪಾಲಕರಿಂದ ದೂರು

A Girl tests HIV positive After Doctor uses same syringe In Uttar Pradesh

#image_title

ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜು ಈಗ ವಿವಾದದ ಕೇಂದ್ರಬಿಂದುವಾಗಿದೆ. ಅಲ್ಲಿನ ವೈದ್ಯರು ಒಂದೇ ಸಿರಿಂಜ್​ ಬಳಸಿ, ಹಲವು ರೋಗಿಗಳಿಗೆ ಇಂಜೆಕ್ಷನ್​ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಮಗುವೊಂದಕ್ಕೆ ಎಚ್​ಐವಿ ಸೋಂಕು ತಗುಲಿದ್ದಾಗಿ (UP Girl Tests HIV) ವರದಿಯಾಗಿದೆ. ಅದರ ಬೆನ್ನಲ್ಲೇ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಟ್​ ಪಾಠಕ್​ ಅವರು ಈ ಬಗ್ಗೆ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಿದ್ದಾರೆ. ಈ ವಿಚಾರವನ್ನು ತನಿಖೆಗೆ ಒಳಪಡಿಸಲಾಗುವುದು ಆರೋಪಿಗಳು ಯಾರೇ ಆಗಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ಆಸ್ಪತ್ರೆಗೆ ಫೆ.20ರಂದು ಬಾಲಕಿಯೊಬ್ಬಳನ್ನು ದಾಖಲಿಸಲಾಗಿತ್ತು. ಆಕೆಗೆ ವೈದ್ಯರು ಇಂಜೆಕ್ಷನ್​ ಕೊಟ್ಟಿದ್ದಾರೆ. ಅದಾದ ಬಳಿಕ ಆಕೆಯ ರಕ್ತದಲ್ಲಿ ಎಚ್​ಐವಿ ಪಾಸಿಟಿವ್​ ಪತ್ತೆಯಾಗಿದೆ ಎಂದು ಅವಳ ಸಂಬಂಧಿಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ಒಂದೇ ಸೂಜಿಯಿಂದ ಹಲವು ಮಕ್ಕಳಿಗೆ ಇಂಜೆಕ್ಷನ್​ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಎಚ್​ಐವಿ ಕಾಣಿಸಿಕೊಂಡಿದ್ದು ಎಂದು ಬಾಲಕಿಯ ಪಾಲಕರು ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಅಗರ್​ವಾಲ್​ ಅವರಿಗೆ ದೂರು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬಾಲಕಿಯಲ್ಲಿ ಎಚ್ಐವಿ ಪತ್ತೆಯಾಗುತ್ತಿದ್ದಂತೆ ನಮ್ಮನ್ನು ರಾತ್ರೋರಾತ್ರಿ ಬಲವಂತದಿಂದ ಆಸ್ಪತ್ರೆ ಹೊರಗೆ ಕಳಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಪಾತಕಿ ಮುಖ್ತಾರ್​ ಅನ್ಸಾರಿ ಮಕ್ಕಳಿಗೆ ಸೇರಿದ ಮನೆ ನೆಲಸಮಗೊಳಿಸಿದ ಉತ್ತರ ಪ್ರದೇಶ ಪೊಲೀಸರು

ಈ ಬಗ್ಗೆ ಜಿಲ್ಲಾಧಿಕಾರಿ ಅವರು, ಮುಖ್ಯ ವೈದ್ಯಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ನಾವು ತನಿಖೆ ಕೈಗೆತ್ತಿಕೊಂಡಿದ್ದೇವೆ. ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಮಗ್ರ ತನಿಖೆ ಬಳಿಕ, ಜಿಲ್ಲಾಧಿಕಾರಿಗೆ ವರದಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

Exit mobile version