Site icon Vistara News

Snake Bite: ಹಾವು ಕಚ್ಚಿದರೂ ಬದುಕುಳಿದಿದ್ದವನ ಪ್ರಾಣ 1 ವಾರದ ನಂತರ ಮತ್ತೊಂದು ಹಾವಿನಿಂದ ಹೋಯ್ತು!

Man And a Viper Snake

ಹಾವಿನ ಬಳಿ ಕಚ್ಚಿಸಿಕೊಂಡು (Snake Bite), ಹಾಗೋ-ಹೀಗೋ ಬದುಕಿ ಉಳಿದಿದ್ದವನ ಜೀವ ಹಾವಿನಿಂದಲೇ ಹೋಗಿದೆ. ಹೀಗೊಂದು ವಿಚಿತ್ರ ಘಟನೆ ರಾಜಸ್ಥಾನದ ಜೋಧ್​ಪುರದ (Rajasthan News) ಮೆಹ್ರಾನ್ ಗಢ್​​ನಲ್ಲಿ ನಡೆದಿದೆ. 44 ವರ್ಷದ ಜಸಬ್​ ಖಾನ್​ ಎಂಬುವರಿಗೆ ಜೂ.20ರಂದು ಒಂದು ಹಾವು ಕಚ್ಚಿತ್ತು. ಕಚ್ಚಿದ್ದು ವಿಷಕಾರಿ ವೈಪರ್ ಹಾವು. ಹೀಗಾಗಿ ಜಸಬ್​ ಖಾನ್​ ಕೂಡಲೇ ಪೋಖ್ರಾನ್​ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

ಆದರೆ ಅದಾಗಿ ಒಂದೇ ವಾರದಲ್ಲಿ ಜಸಬ್ ಖಾನ್ ಪ್ರಾಣ ಹಾವಿನಿಂದಲೇ ಹೋಗಿದೆ. ಜೂ.26ರಂದು ಮತ್ತೆ ಅವರಿಗೆ ಮನೆ ಬಳಿಯೇ ಹಾವು ಕಡಿದಿದೆ. ಜೂ.20ರಂದು ಕಚ್ಚಿದ ಹಾವೇ ಕಚ್ಚಿತಾ? ಅಥವಾ ಬೇರೆ ಹಾವು ಕಚ್ಚಿದ್ದಾ? ಎಂಬುದು ಗೊತ್ತಿಲ್ಲ. ಆದರೆ ಎರಡನೇ ಸಲವೂ ಕೂಡ ಕಡಿದಿದ್ದು ವಿಷಕಾರಿ ವೈಪರ್​. ಮೊದಲ ಸಲ ಹಾವಿನ ಬಳಿ ಕಚ್ಚಿಸಿಕೊಂಡು ಬದುಕುಳಿದಿದ್ದ ಜಸಬ್ ಈ ಸಲ ಬದುಕಲಿಲ್ಲ. ಜೋಧಪುರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಜಸಬ್​ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Video Viral : ಕೈಯಲ್ಲಿ ಗರುಡ ರೇಖೆ ಇದೆ, ನಂಗೇನೂ ಆಗಲ್ಲ ಎಂದು ಹಾವು‌ ಹಿಡಿದು ಕಚ್ಚಿಸಿಕೊಂಡ! ಸತ್ತೇ ಹೋದ್ನಾ?

ಜಸಬ್​ ಖಾನ್​ಗೆ ಮೊದಲ ಬಾರಿ ಅಂದರೆ ಜೂನ್​ 20ರಂದು ಪಾದಕ್ಕೆ ಹಾವು ಕಚ್ಚಿತ್ತು. ಅದೇ ಜೂನ್​ 26ರಂದು ಕಾಲಿಗೆ ಕಚ್ಚಿದೆ. ಮೊದಲ ಸಲ ಹಾವು ಕಚ್ಚಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದರೂ, ಅವರ ದೇಹದಿಂದ ವಿಷದ ಅಂಶ ಸಂಪೂರ್ಣವಾಗಿ ಹೋಗಿರಲಿಲ್ಲ. ಅಷ್ಟರೊಳಗೆ ಮತ್ತೊಮ್ಮೆ ವಿಷ ದೇಹಕ್ಕೆ ಸೇರಿದ್ದರಿಂದ ಎರಡನೇ ಬಾರಿ ಅವರ ಜೀವ ಉಳಿಯಲಿಲ್ಲ. ಇವರು ಅಮ್ಮ, ಪತ್ನಿ, ಐವರು ಹೆಣ್ಣುಮಕ್ಕಳು ಮತ್ತು 5ವರ್ಷದ ಮಗನೊಂದಿಗೆ ಇದ್ದರು. ಇನ್ನು ಜಸಬ್​ ಖಾನ್​ಗೆ ಕಚ್ಚಿದ ಹಾವನ್ನು ಅವರ ಕುಟುಂಬದವರು ಸೇರಿ ಕೊಂದಿದ್ದಾರೆ.

Exit mobile version