ಆಗ್ರಾ: ಸೋಷಿಯಲ್ ಮೀಡಿಯಾ (Social Media)ಗಳಲ್ಲಿ ಸಕ್ರಿಯ ಆಗಿರುವುದು ಬೇರೆ, ಅದರ ಗೀಳು ಹತ್ತಿಸಿಕೊಳ್ಳುವುದೇ ಬೇರೆ. ಹೀಗೆ ಸೋಷಿಯಲ್ ಮೀಡಿಯಾ ಚಟ ಹತ್ತಿಸಿಕೊಂಡವರು ತಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುತ್ತಾರೆ. ಎಂಥೆಂಥದೋ ಪೋಸ್ಟ್ಗಳನ್ನು ಹಾಕಿ, ಜನರನ್ನು ಸೆಳೆಯಲು ಪ್ರಯತ್ನ ಮಾಡುತ್ತಿರುತ್ತಾರೆ. ಅದರಂತೆ ಇಲ್ಲೊಬ್ಬ 28 ವರ್ಷದ ಯುವಕ ತನ್ನ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮಾಡಬಾರದ ಕೆಲಸ ಮಾಡಿದ್ದಾನೆ. ತನ್ನ ಪತ್ನಿಯ ಮಾನವನ್ನೇ ಕಳೆದಿದ್ದಾನೆ.
ಈ ಯುವಕನ ಪತ್ನಿಗೆ 26 ವರ್ಷ. ಇವಳು ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ವಾಸವಾಗಿದ್ದರೆ, ಆಕೆಯ ಪತಿ ದೆಹಲಿಯ ಉತ್ತಮ ನಗರದಲ್ಲಿ ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಹೀಗಾಗಿ ಅಲ್ಲಿಯೇ ಇರುತ್ತಾನೆ. ಹೀಗೆ ಇವರಿಬ್ಬರೂ ವಿಡಿಯೋ ಕಾಲ್ ಮಾಡಿಕೊಂಡಾಗ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಪತಿಯೇ ಅಲ್ಲವೇ ಎಂದು ಆ ಮಹಿಳೆ ತಾನು ಸ್ನಾನ ಮಾಡುವುದನ್ನೂ ರೆಕಾರ್ಡ್ ಮಾಡಿ ಕಳಿಸಿದ್ದರು. ಆದರೆ ಪತಿ ತನಗೆ ಫಾಲೋವರ್ಸ್ ಬೇಕೆಂದು ಪತ್ನಿ ಸ್ನಾನ ಮಾಡುವ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಪತಿಯ ವಿರುದ್ಧ ಆಕೆಯೇ ಪೊಲೀಸರಿಗೆ ದೂರು ನೀಡಿದ್ದಳು. ನಂತರ ಪೊಲೀಸರು ಅವನ ಫೇಸ್ಬುಕ್ ಅಕೌಂಟ್ನ್ನು ಡಿಲೀಟ್ ಮಾಡಿಸಿದ್ದಾರೆ.
ನನಗೆ ನನ್ನ ಪತಿ ಸೋಷಿಯಲ್ ಮೀಡಿಯಾಕ್ಕೆ ಅಡಿಕ್ಟ್ ಆಗಿದ್ದಾರೆಂದು ಗೊತ್ತಿತ್ತು. ಆದರೆ ಫಾಲೋವರ್ಸ್, ಲೈಕ್ಸ್ ಹೆಚ್ಚಿಸಿಕೊಳ್ಳಲು ಇಂಥ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ಆತನ ಫೇಸ್ಬುಕ್ ಪ್ರೊಫೈಲ್ನಲ್ಲಿ ನನ್ನ ಅಶ್ಲೀಲ, ಬೆತ್ತಲೆ ಫೋಟೋ, ವಿಡಿಯೋ ನೋಡಿ ನಿಜಕ್ಕೂ ಶಾಕ್ ಆಯಿತು. ಅದನ್ನು ಡಿಲೀಟ್ ಮಾಡುವಂತೆ ಅವನಿಗೆ ಒತ್ತಾಯಿಸಿದೆ, ಬೈದೆ. ಆದರೆ ಆತ ಡಿಲೀಟ್ ಮಾಡಲಿಲ್ಲ’ ಎಂದು ಆ ಮಹಿಳೆ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನನ್ನ ಪತಿಯನ್ನು ಕೂಡಲೇ ಬಂಧಿಸಿ, ಜೈಲಿಗೆ ಕಳಿಸಿ. ಕಠಿಣ ಕ್ರಮ ಕೈಗೊಳ್ಳಿ ಎಂದೂ ಆಗ್ರಹಿಸಿದ್ದಾರೆ. ‘ಮಹಿಳೆ ಕೊಟ್ಟ ದೂರಿನ ಅನ್ವಯ ಆಕೆಯ ಪತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಇಬ್ಬರಿಗೂ ಸಮನ್ಸ್ ನೀಡಿ, ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು’ ಸ್ಥಳೀಯ ಎಸ್ಪಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಸದ ಪ್ರತಾಪ ಸಿಂಹ, ದಿನೇಶ್ ಅಮೀನ್ ಮಟ್ಟು ನಡುವೆ ʻರೈಲುʼ ಫೈಟ್: ಸೋಷಿಯಲ್ ಮೀಡಿಯಾದಲ್ಲಿ ಬೈದಾಟ