Site icon Vistara News

ಮಾರ್ಗಮಧ್ಯೆಯೇ ಚಾಲಕನಿಗೆ ಹೃದಯಾಘಾತ; ಸ್ಟೀರಿಂಗ್​ ಹಿಡಿದು ಬಸ್​ ನಿಲ್ಲಿಸಿ, ದೊಡ್ಡ ದುರಂತ ತಪ್ಪಿಸಿದ ವಿದ್ಯಾರ್ಥಿನಿ

A schoolgirl averted a bus accident In Gujarat

#image_title

ಗುಜರಾತ್​​ನ ರಾಜ್​ಕೋಟ್​​ನಲ್ಲಿ ವಿದ್ಯಾರ್ಥಿನಿಯೊಬ್ಬಳ ಸಮಯ ಪ್ರಜ್ಞೆಯಿಂದ ಬಹುದೊಡ್ಡ ಬಸ್​ ದುರಂತವೊಂದು ತಪ್ಪಿದೆ. ವಿದ್ಯಾರ್ಥಿನಿ ಹೆಸರು ಭಾರ್ಗವಿ ವ್ಯಾಸ್​. ಶಾಲಾ ಬಸ್​​ ಅಪಘಾತಕ್ಕೀಡಾಗುವುದನ್ನು ತಪ್ಪಿಸಿ, ತಾನು ಬಚಾವ್​ ಆಗುವ ಜತೆಗೆ, ಇನ್ನಿತರ ವಿದ್ಯಾರ್ಥಿಗಳನ್ನು ರಕ್ಷಿಸಿದ ಇವಳ ಧೈರ್ಯಕ್ಕೆ ಈಗ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜ್​ಕೋಟ್​​ನ ಗೊಂಡಲ್​ ಎಂಬಲ್ಲಿ ಈ ಶಾಲಾ ಬಸ್​ ಪ್ರಯಾಣ ಮಾಡುತ್ತಿತ್ತು. ಆದರೆ ಮಾರ್ಗಮಧ್ಯೆ ಚಾಲಕನ ಆರೋಗ್ಯದಲ್ಲಿ ಏರುಪೇರಾಗಿದೆ. ಹೃದಯಾಘಾತವಾದ ಪರಿಣಾಮ ಚಾಲಕ, ಬಸ್​​ ಮೇಲೆ ನಿಯಂತ್ರಣ ಸಾಧಿಸಲು ತುಂಬ ಕಷ್ಟಪಡುತ್ತಿದ್ದರು. ಹಾಗೇ ಸ್ಟೀರಿಂಗ್​ ಮೇಲಯೇ ತಲೆಯಿಟ್ಟು ಮಲಗಿದ್ದರು. ಹೀಗಾಗಿ ಬಸ್​ ಎಡಗಡೆಯಿಂದ ಬಲಗಡೆಗೆ ಹೋಗಿತ್ತು. ಬಸ್​ ಚಾಲಕನ ಅಸ್ವಸ್ಥತೆಯನ್ನು ಅದರಲ್ಲಿದ್ದ ಎಲ್ಲರೂ ಗಮನಿಸಿದರೂ, ಯಾರಿಗೆ ಏನೂ ಮಾಡಲಾಗದೆ ಕಂಗಾಲಾಗಿದ್ದರು. ಅಷ್ಟರಲ್ಲಿ ಧೈರ್ಯದಿಂದ ಮುಂದೆ ಬಂದ ಭಾರ್ಗವಿ ವ್ಯಾಸ್, ಬಸ್​ ಸ್ಟೀರಿಂಗ್​ ಹಿಡಿದಳು. ನಿಧಾನವಾಗಿ ಅದನ್ನು ತಿರುಗಿಸುತ್ತ ನಿಯಂತ್ರಿಸಿದಳು. ಸ್ವಲ್ಪ ಕಾಲದ ಬಳಿಕ ಬಸ್​​ನ್ನು ಅಲ್ಲೇ ಇದ್ದ ಒಂದು ಕಂಬಕ್ಕೆ, ಅತ್ಯಂತ ನಿಧಾನವಾಗಿ ಡಿಕ್ಕಿ ಮಾಡಿಸಿ ನಿಲ್ಲಿಸಿದಳು. ಇದರಿಂದ ದೊಡ್ಡಮಟ್ಟದ ಅನಾಹುತ ತಪ್ಪಿದೆ. ವಿದ್ಯಾರ್ಥಿಗಳಿಗೆ ಯಾರಿಗೂ, ಏನೂ ಅಪಾಯವಾಗಿಲ್ಲ.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದವನಿಗೆ ಭೀಕರ ಅಪಘಾತ; ಛಿದ್ರವಾದ ದೇಹ, 100 ಮೀಟರ್​ವರೆಗೆ ಚದುರಿ ಬಿದ್ದ ಅಂಗಗಳು

ಬಸ್ ಚಾಲಕನಿಗೆ ಹೃದಯಾಘಾತವಾದ ಸಂದರ್ಭದಲ್ಲಿ ಆತ ಡ್ರೈವ್​ ಮಾಡುತ್ತಿದ್ದಾಗ ಕೆಲವು ವಾಹನಗಳಿಗೆ ಡಿಕ್ಕಿಯಾಗಿದೆ. ಅದೂ ಕೂಡ ಯಾರಿಗೂ ದೊಡ್ಡ ಪೆಟ್ಟು ಆಗಿಲ್ಲ. ಸದ್ಯ ಚಾಲಕನಿಗೆ ಸಿವಿಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಭಾರ್ಗವಿ ಧೈರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ.

Exit mobile version