Site icon Vistara News

Viral Video: ಆಜಾನ್‌ ಶುರುವಾಗುತ್ತಿದ್ದಂತೆ ಭಾಷಣ ನಿಲ್ಲಿಸಿದ ಆದಿತ್ಯ ಠಾಕ್ರೆ

Aaditya Thackeray

ಮುಂಬೈ: ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಭಾಷಣ ಮಾಡುತ್ತಿದ್ದ ವೇಳೆ ಮಧ್ಯೆ ಆಜಾನ್‌ ಶುರುವಾದ ಹಿನ್ನೆಲೆಯಲ್ಲಿ, ಅದು ಮುಗಿಯುವವರೆಗೂ ಅವರು ತಮ್ಮ ಮಾತನ್ನು ನಿಲ್ಲಿಸಿದ್ದರು. ಈ ವಿಡಿಯೋ ಕೂಡ ವೈರಲ್‌ ಆಗಿದೆ. ಮುಂಬೈನ ಚಂಡಿವಾಲಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆದಿತ್ಯ ಠಾಕ್ರೆ ನೇತೃತ್ವದಲ್ಲಿ ನಿಷ್ಠಾ ಯಾತ್ರೆಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಆದಿತ್ಯ ಠಾಕ್ರೆ ಮಾತನಾಡುತ್ತಿದ್ದರು. ಅದೇ ವೇಳೆ ಸಮೀಪದ ಮಸೀದಿಯೊಂದರಲ್ಲಿ ನಿತ್ಯದ ಆಜಾನ್‌ (ಮುಸ್ಲಿಮರ ಪ್ರಾರ್ಥನೆ) ಪ್ರಾರಂಭವಾಗಿತ್ತು. ಆಗ ತಕ್ಷಣವೇ ಆದಿತ್ಯ ಠಾಕ್ರೆ ತಮ್ಮ ಮಾತು ನಿಲ್ಲಿಸಿ ಸುಮ್ಮನೆ ನಿಂತರು. ಆಜಾನ್‌ ಮುಗಿದ ಬಳಿಕವಷ್ಟೇ ಅವರು ಭಾಷಣ ಮುಂದುವರಿಸಿದರು. ಈ ವಿಡಿಯೋ ವೈರಲ್‌ ಆಗಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗಷ್ಟೇ ಮಸೀದಿ ಲೌಡ್‌ಸ್ಪೀಕರ್‌ ಸಂಬಂಧಪಟ್ಟು ವಿವಾದ ಸೃಷ್ಟಿಯಾಗಿತ್ತು. ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕ್ರೆ, ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ ಬಳಕೆ ವಿರುದ್ಧ ತಿರುಗಿಬಿದ್ದಿದ್ದರು. ಆಗ ಹೇಳಿಕೆ ನೀಡಿದ್ದ ಆದಿತ್ಯ ಠಾಕ್ರೆ , ʼಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಹೀಗೆ ಜನರಿಗೆ ಮೈಕ್‌ ಹಾಕಿ ಹೇಳುವ ಅಗತ್ಯವಿದೆʼ ಎಂದು ಹೇಳಿದ್ದರು. ಶಿವಸೇನೆಯಲ್ಲಿ ಎರಡು ಬಣಗಳಾಗಿವೆ. ಹಲವು ನಾಯಕರು ಏಕನಾಥ ಶಿಂಧೆ ಬಣಕ್ಕೆ ಹಾರಿದ್ದಾರೆ. ಹೀಗೆ ಏಕನಾಥ ಶಿಂಧೆ ಜತೆ ಹೋದ ಶಾಸಕರು/ಸಂಸದರ ಕ್ಷೇತ್ರಗಳಲ್ಲಿ ಆದಿತ್ಯ ಠಾಕ್ರೆ ನಿಷ್ಠಾ ಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯ ಮೊದಲ ಹಂತದಲ್ಲಿ ಆದಿತ್ಯ ಠಾಕ್ರೆ ಥಾಣೆ, ನಾಶಿಕ್‌, ಔರಂಗಾಬಾದ್‌ ಜಿಲ್ಲೆಗಳಿಗೆ ಭೇಟಿಕೊಟ್ಟಿದ್ದಾರೆ.

ಇದನ್ನೂ ಓದಿ: ಮಹಾ ಪಾಲಿಟಿಕ್ಸ್‌ | ಉದ್ಧವ್‌ ಬಣದ ಎಲ್ಲರಿಗೂ ಅನರ್ಹತೆ ನೋಟಿಸ್‌ ನೀಡಿದ ಶಿಂಧೆ ಬಣ, ಆದಿತ್ಯ ಠಾಕ್ರೆಗೆ ಇಲ್ಲ!

Exit mobile version