ನವ ದೆಹಲಿ: ಗೆಳತಿ ಶ್ರದ್ಧಾ ವಾಲ್ಕರ್ ಕೊಂದು ದೇಹವನ್ನು 35 ತುಂಡುಗಳಾಗಿ ಮಾಡಲು ಒಂದು ಗರಗಸ ಹಾಗೂ ಎರಡು ಚಾಕು ಬಳಸಿಕೊಂಡಿದ್ದೇನೆ ಎಂಬುದಾಗಿ ಕೊಲೆಗಾರ ಅಫ್ತಾಬ್ ಪೂನಾವಾಲ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ದೇಶವನ್ನೇ ತಲ್ಲಣಗೊಳಿಸಿರುವ ಈ ಪ್ರಕರಣದ (Shraddha Walker murder case) ತನಿಖೆ ನಡೆಸಿರುವ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ ಇಂಡಿಯಾ ಟುಡೆಗೆ ಲಭ್ಯವಾಗಿದ್ದು, ಅದರಲ್ಲಿ ಈ ಎಲ್ಲ ಮಾಹಿತಿಗಳು ದಾಖಲಾಗಿವೆ. ಜತೆಗೆ ಅರೋಪಿ ಅಫ್ತಾಬ್ ಹಲವು ಬಾರಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿರುವುದೂ ಗೊತ್ತಾಗಿದೆ.
ಆರೋಪಿ ಅಪ್ತಾಬ್ ಪೊಲೀಸರಿಗೆ ಸೆರೆ ಸಿಕ್ಕಿದ ಬಳಿಕ ನಡೆದ ವಿಚಾರಣೆಯಲ್ಲಿ ತನಿಖಾಧಿಕಾರಿಗಳದ್ದೇ ದಾರಿ ತಪ್ಪಿಸಲು ಯತ್ನಿಸಿದ್ದ. ಶ್ರದ್ಧಾಳ ಮೂಳೆಯನ್ನು ಸುಟ್ಟು ಬಿಸಾಕಿದ್ದೇನೆ ಎಂದು ಹೇಳಿದ್ದೇ. ಅದೇ ರೀತಿ ನಾನು ಹಿಂದೆ ನೀಡಿರುವ ಹೇಳಿಕೆಗಳು ಸಂಪೂರ್ಣವಾಗಿ ಸತ್ಯವಲ್ಲ ಎಂಬುದಾಗಿ ಹೇಳಿರುವುದು ಚಾರ್ಜ್ಶೀಟ್ನಲ್ಲಿ ದಾಖಲಾಗಿದೆ.
ಸಂಜೆ 7.45 ನಿಮಿಷಕ್ಕೆ ನಾನು ಶ್ರದ್ಧಾಳನ್ನು ಕೊಲೆ ಮಾಡಿದ್ದೆ. ಬಳಿಕ 60 ಅಡಿ ರಸ್ತೆಯಲ್ಲಿರುವ ಹಾರ್ಡ್ವೇರ್ ಅಂಗಡಿಗೆ ತೆರಳಿ ಒಂದು ಗರಗಸ ಹಾಗೂ ಎರಡು ಚಾಕುವನ್ನು ಖರೀದಿಸಿ ತಂದಿದ್ದೆ. ಬಳಿಕ ಶ್ರದ್ಧಾಳ ದೇಹವನ್ನು ಬಾತ್ರೂಮ್ಗೆ ತೆಗೆದುಕೊಂಡು ಹೋಗಿ ಒಂದೊಂದೇ ಭಾಗವನ್ನು ಕತ್ತರಿಸಲು ಆರಂಭಿಸಿದೆ. ಮೊದಲಿಗೆ ಮಣಿಕಟ್ಟಿನ ಭಾಗವನ್ನು ಕತ್ತರಿಸಲು ಆರಂಭಿಸಿದ್ದೇ. ಈ ವೇಳೆ ನನ್ನ ಕೈಗೂ ಗಾಯವಾಯಿತು ಎಂದು ಅಫ್ತಾಬ್ ನೀಡಿರುವ ಹೇಳಿಕೆ ಚಾರ್ಜ್ಶೀಟ್ನಲ್ಲಿ ದಾಖಲಾಗಿದೆ.
ಕೊಲೆ ಮಾಡಿದ ದಿನವೇ ಶ್ರದ್ಧಾಳ ಮೃತದೇಹದ ತೊಡೆ ಭಾಗವನ್ನು ಕಾಡೊಂದರಲ್ಲಿ ಎಸೆದಿದ್ದೇ. ನಂತರದ ನಾಲ್ಕೈದು ದಿನಗಳಲ್ಲಿ ದೇಹವನ್ನು 17 ತುಂಡುಗಳಾಗಿ ತುಂಡರಿಸಿದೆ. ಬಳಿಕ ಅವುಗಳನ್ನು ಫ್ರಿಜ್ನಲ್ಲಿ ಇಟ್ಟಿದ್ದೆ. ನನಗೆ ಸಮಯ ಸಿಕ್ಕಾಗೆಲ್ಲ ಒಂದೊಂದೆ ಭಾಗಗಳನ್ನು ಎಸೆದು ಬರುತ್ತಿದ್ದೆ ಎಂದು ಆತ ಹೇಳಿರುವುದು ಚಾರ್ಜ್ಶೀಟ್ನಲ್ಲಿ ದಾಖಲಾಗಿದೆ.
ಇದನ್ನೂ ಓದಿ : Delhi Crime | ದೆಹಲಿ ಹಲವೆಡೆ ಶ್ರದ್ಧಾ ದೇಹದ 10 ಭಾಗ ಪತ್ತೆ, ಕೃತ್ಯದ ಸ್ಥಳಕ್ಕೆ ಅಫ್ತಾಬ್‌ನನ್ನು ಕರೆದೊಯ್ದ ಪೊಲೀಸರು
ಕಳೆದ ಜನವರಿ 24ರಂದು ಡೆಲ್ಲಿ ಪೊಲೀಸರು 6629 ಪುಟಗಳ ಚಾರ್ಜ್ಶೀಟ್ ಅನ್ನು ಕೋರ್ಟ್ಗೆ ಸಲ್ಲಿಸಿದ್ದರು. ಜತೆಗೆ ಅಫ್ತಾಬ್ನ ಹೇಳಿಕೆಗಳ ವಿಡಿಯೊವನ್ನು ಕೂಡ ಸಲ್ಲಿಕೆ ಮಾಡಲಾಗಿತ್ತು.