Site icon Vistara News

ಹೆದ್ದಾರಿಯಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಜನಪ್ರಿಯ ನಟಿ; ಪತಿ ಮೂತ್ರ ವಿಸರ್ಜನೆಗೆ ಹೋದಾಗ ನಡೆಯಿತು ಅಟ್ಯಾಕ್​

actress Riya Kumari Shot Dead In West Bengal

ರಾಂಚಿ: ಜಾರ್ಖಂಡ ಮೂಲದ ಟಿವಿ ನಟಿಯೊಬ್ಬರು ಪಶ್ಚಿಮ ಬಂಗಾಳದ ಹೌರಾಹ್​​ನಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಜಾರ್ಖಂಡ್​​ನ ಯುವ ನಟಿ ರಿಯಾ ಕುಮಾರಿ, ತನ್ನ ಪತಿ, ಚಿತ್ರ ನಿರ್ದೇಶಕ ಪ್ರಕಾಶ್​ ಕುಮಾರ್ ಮತ್ತು 3 ವರ್ಷದ ಮಗುವಿನೊಂದಿಗೆ​ ಅವರೊಂದಿಗೆ ರಾಂಚಿಯಿಂದ ರಾಷ್ಟ್ರೀಯ ಹೆದ್ದಾರಿ 16ರ ಮೂಲಕ ಕೋಲ್ಕತ್ತಕ್ಕೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ದಾರಿ ಮಧ್ಯೆ ಈ ದಂಪತಿ ಮೇಲೆ ದರೋಡೆಕೋರರು ದಾಳಿ ನಡೆಸಿದ್ದಾರೆ. ಅವರ ಬಳಿ ಇದ್ದ ಹಣ ದೋಚಲು ಮುಂದಾಗಿದ್ದಾರೆ. ಅದು ಸಾಧ್ಯವಾಗದೆ ಇದ್ದಾಗ ರಿಯಾಕುಮಾರಿಗೆ ಶೂಟ್​ ಮಾಡಿ ಓಡಿದ್ದಾರೆ.

ಬುಧವಾರ ಮುಂಜಾನೆ 6ಗಂಟೆ ಹೊತ್ತಿಗೆ ದುರ್ಘಟನೆ ನಡೆದಿದೆ. ಪ್ರಕಾಶ್​ ಕುಮಾರ್​ ಅವರು ಮೂತ್ರ ವಿಸರ್ಜನೆಗಾಗಿ ಕಾರನ್ನು ಒಂದು ಕಡೆ ನಿಲ್ಲಿಸಿದ್ದರು. ಅಲ್ಲಿ ಜನಸಂಚಾರ ಇರಲಿಲ್ಲ. ಸ್ವಲ್ಪ ಕಾಡಿನಂಥ ಪ್ರದೇಶವಾಗಿತ್ತು. ಇದೇ ವೇಳೆ ಮೂವರು ದರೋಡೆಕೋರರು ಅಲ್ಲಿಗೆ ಬಂದು ದಾಳಿ ನಡೆಸಲು ಮುಂದಾಗಿದ್ದಾರೆ. ಆಗ ರಿಯಾ ಕುಮಾರಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಆಕೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪ್ರಕಾಶ್​ ಕುಮಾರ್​ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಪ್ರಾರಂಭವಾಗಿದೆ.

‘ನಾನು ಕಾರು ನಿಲ್ಲಿಸಿ, ಮೂತ್ರ ವಿಸರ್ಜನೆಗಾಗಿ ಸ್ವಲ್ಪ ದೂರ ಹೋದೆ. ಆಗ ನನ್ನ ಪತ್ನಿ ಮತ್ತು ಮಗಳು ಕಾರಿನಲ್ಲಿಯೇ ಕುಳಿತಿದ್ದರು. ಆಗ ಅಲ್ಲಿಗೆ ಬಂದ ಕಳ್ಳರು, ಕಾರಿನಲ್ಲೇ ನಾನು ಬಿಟ್ಟುಹೋಗಿದ್ದ ಪರ್ಸ್​​ನ್ನು ಕಿತ್ತುಕೊಳ್ಳಲು ಮುಂದಾದರು. ಆಗ ನನ್ನ ಹೆಂಡತಿ ಅವರನ್ನು ತಡೆದಳು. ಅಷ್ಟರಲ್ಲಿ ಆಕೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು’ ಎಂದು ಪ್ರಕಾಶ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಿಯಾ ಕುಮಾರಿ ಜಾರ್ಖಂಡ್​​ನಲ್ಲಿ ಫೇಮಸ್​ ನಟಿ. ಅಲ್ಲಿ ಈಕೆ ಇಶಾ ಅಲ್ಯಾ ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಅವಳ ಪತಿ ಪ್ರಕಾಶ್​ ಕುಮಾರ್​ ಕೂಡ ಚಿತ್ರರಂಗದಲ್ಲೇ ಇದ್ದು, ಅವರು ನಿರ್ದೇಶಕ ಎಂದು ಹೇಳಲಾಗಿದೆ.

ಇದನ್ನೂ ಓದಿ: Leena Nagwanshi Death | ನಟಿ ತುನಿಶಾ ಶರ್ಮಾ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ 22 ವರ್ಷದ ಯುಟ್ಯೂಬರ್‌ ಆತ್ಮಹತ್ಯೆ

Exit mobile version