Site icon Vistara News

Video| ಭಾರತ್​ ಜೋಡೋ ಯಾತ್ರೆಗೆ ನಟಿ ಸ್ವರಾ ಭಾಸ್ಕರ್​ ಸಾಥ್​; ರಾಹುಲ್ ಗಾಂಧಿ ಜತೆ ಮಾತು-ನಡಿಗೆ

Actress Swara Bhaskar Join Bharat Jodo Yatra Video Viral

ಕಾಂಗ್ರೆಸ್​​ನ ಭಾರತ್​ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ಇದ್ದು, ಇಂದು ಮುಂಜಾನೆ 6ಗಂಟೆಗೆ ಉಜ್ಜಯಿನಿಯ ಆರ್​​​.ಡಿ.ಗಾರ್ಡಿ ವೈದ್ಯಕೀಯ ಕಾಲೇಜಿನ ಮೈದಾನದಿಂದ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭವಾಗಿದೆ. ಹೀಗೆ ಪಾದಯಾತ್ರೆ ಪ್ರಾರಂಭವಾದ ಕೆಲವೇ ಹೊತ್ತಲ್ಲಿ, ಬಾಲಿವುಟ್​ ನಟಿ ಸ್ವರಾ ಭಾಸ್ಕರ್​ ಮತ್ತು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್​ ರಾವತ್​ ಅವರು ಭಾರತ್ ಜೋಡೋ ಯಾತ್ರೆಗೆ ಸೇರಿಕೊಂಡಿದ್ದಾರೆ. ನಟಿ ಸ್ವರಾ ಭಾಸ್ಕರ್​ ಅವರು ರಾಹುಲ್​ ಗಾಂಧಿಯವರ ಜತೆ ಮಾತನಾಡುತ್ತ, ಪಕ್ಕದಲ್ಲೇ ಹೆಜ್ಜೆ ಹಾಕುವುದನ್ನು ಕೆಳಗಿನ ವಿಡಿಯೊದಲ್ಲಿ ನೋಡಬಹುದು.

ಸ್ವರಾ ಭಾಸ್ಕರ್​ ಅವರು ಭಾರತ್​ ಜೋಡೋ ಯಾತ್ರೆ ಬಗ್ಗೆ ಅಕ್ಟೋಬರ್​​ನಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿಯವರ ಪಾದಯಾತ್ರೆಯ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು, ಹೊಗಳಿದ್ದ ಅವರು, ‘ಸಾಲುಸಾಲು ಚುನಾವಣಾ ಸೋಲುಗಳು, ಟ್ರೋಲ್​​ಗಳು, ವೈಯಕ್ತಿಕ ಮಾತುಗಳಿಂದ ಟೀಕೆ, ನಿರಂತರ ವ್ಯಂಗ್ಯಗಳು ಎದುರಾದರೂ ರಾಹುಲ್ ಗಾಂಧಿಯವರು ಕೋಮುಸೌಹಾರ್ದತೆ ಕದಡುವ ಮಾತುಗಳನ್ನಾಡಲಿಲ್ಲ. ಪ್ರಚೋದನಾಕಾರಿ ರಾಜಕಾರಣ ಮಾಡಲಿಲ್ಲ. ಬದಲಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ದೇಶದ ಸದ್ಯದ ಪರಿಸ್ಥಿತಿಗೆ ಈ ಭಾರತ್ ಜೋಡೋ ಯಾತ್ರೆ ಅತ್ಯಗತ್ಯ’ ಎಂದು ಹೇಳಿದ್ದರು.

ಭಾರತ್​ ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ನಟಿ ರಮ್ಯಾ ಸಾಥ್​ ಕೊಟ್ಟಿದ್ದರು. ತೆಲಂಗಾಣದಲ್ಲಿ ನಟಿ-ನಿರ್ಮಾಪಕಿ ಪೂಜಾ ಭಟ್​ ಸೇರಿಕೊಂಡಿದ್ದರು. ಹಾಗೇ, ಮಹಾರಾಷ್ಟ್ರದಲ್ಲಿ ನಟಿ ರಿಯಾ ಸೇನ್​ ಕೂಡಿಕೊಂಡಿದ್ದರು. ಇದೀಗ ಮಧ್ಯಪ್ರದೇಶದಲ್ಲಿ, ‘ಪ್ರೇಮ್​ ರತನ್​ ಧನ್​ ಪಾಯೋ, ದಿ ಸ್ಟೋರಿ, ವೀರೆ ದಿ ವೆಡ್ಡಿಂಗ್ ಇತ್ಯಾದಿ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟಿ ಸ್ವರಾ ಭಾಸ್ಕರ್ ಹೆಜ್ಜೆ ಹಾಕಿದ್ದಾರೆ. ​

ಇದನ್ನೂ ಓದಿ: Bharat Jodo Yatra| ಭಾರತ್​ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ; ಕೆ ಸಿ ವೇಣುಗೋಪಾಲ್​​ಗೆ ಗಾಯ

Exit mobile version