Site icon Vistara News

Aadhaar Mandatory | ಸರ್ಕಾರಿ ಸೌಲಭ್ಯ, ಸಬ್ಸಿಡಿ ಪಡೆಯಲು ಇನ್ನು ಆಧಾರ್‌ ಕಡ್ಡಾಯ

Adhaar Card

ಹೊಸದಿಲ್ಲಿ: ಸರ್ಕಾರದ ಸೌಲಭ್ಯ, ಯೋಜನೆಗಳ ಅನುಕೂಲ ಹಾಗೂ ಸಬ್ಸಿಡಿ ಪಡೆಯಲು ಇನ್ನು ಆಧಾರ್‌ ಕಾರ್ಡ್‌ (Aadhaar Mandatory) ಕಡ್ಡಾಯವಾಗಿದೆ. ಅನರ್ಹ ವ್ಯಕ್ತಿಗಳು ಸರ್ಕಾರದ ಸೌಲಭ್ಯ ಪಡೆಯುವುದನ್ನು ತಪ್ಪಿಸಲು ಹಾಗೂ ಯೋಜನೆಯ ಲಾಭವನ್ನು ಸರಿಯಾಗಿ ಫಲಾನುಭವಿಗಳಿಗೆ ತಲುಪಿಸುವ ದೃಷ್ಟಿಯಲ್ಲಿ ಆಧಾರ್‌ ಕಡ್ಡಾಯಗೊಳಿಸಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಕೇಂದ್ರದ ಎಲ್ಲ ಸಚಿವಾಲಯ ಹಾಗೂ ಎಲ್ಲ ರಾಜ್ಯ ಸರ್ಕಾರಗಳಿಗೆ ಈ ಕುರಿತು ಸುತ್ತೋಲೆ ಹೊರಡಿಸಿದೆ. ಸರಕಾರದ ಯೋಜನೆಗಳಿಗೆ ಆಧಾರ್‌ ಕಡ್ಡಾಯಗೊಳಿಸಬೇಕು ಎಂದು ಸೂಚಿಸಿದೆ. ಆಗಸ್ಟ್‌ ೧೧ರಂದೇ ಯುಐಡಿಎಐ ಸುತ್ತೋಲೆ ಹೊರಡಿಸಿದೆ.

ಸಾರ್ವಜನಿಕರು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್‌ ಕಾರ್ಡ್‌ ಅಥವಾ ಆಧಾರ್‌ ನಂಬರ್‌ ಅಥವಾ ಇನ್ನೂ ಆಧಾರ್‌ ಲಭ್ಯವಾಗಿರದಿದ್ದರೆ ಎನ್ರಾಲ್‌ಮೆಂಟ್‌ ಸ್ಲಿಪ್‌ ಇರಬೇಕು. ಕನಿಷ್ಠ ಇಷ್ಟು ಮಾಹಿತಿ ಅಥವಾ ದಾಖಲೆ ಇದ್ದರೆ ಮಾತ್ರ ಯೋಜನೆಗಳ ಲಾಭ ಪಡೆಯಬಹುದಾಗಿದೆ.

ಯುಐಡಿಎಐ ೨೦೨೧ರ ಆಗಸ್ಟ್‌ ೩೧ರಂದು ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ೧೩೧.೬೮ ಕೋಟಿ ಆಧಾರ್‌ ಕಾರ್ಡ್‌ದಾರರು ಇದ್ದಾರೆ. ಇತ್ತೀಚಿನ ಮಾಹಿತಿ ಅನ್ವಯ ಸದ್ಯ ಶೇ.೯೯ರಷ್ಟು ವಯಸ್ಕರ ಬಳಿ ಆಧಾರ್‌ ಕಾರ್ಡ್‌ ಇವೆ ಎಂದು ತಿಳಿಸಿದೆ. ಸರ್ಕಾರದ ಯೋಜನೆಗಳ ದುರ್ಬಳಕೆ, ಅನರ್ಹರೂ ಯೋಜನೆಯ ಲಾಭ ಪಡೆಯುವಲ್ಲಿ ಆಧಾರ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ಇದನ್ನೂ ಓದಿ | Aadhaar Update| 6 ಲಕ್ಷ ನಕಲಿ ಆಧಾರ್‌ ಕಾರ್ಡ್ ರದ್ದು, ನಕಲಿ-ಅಸಲಿ ಪತ್ತೆ ಮಾಡುವುದು ಹೇಗೆ?

Exit mobile version