Site icon Vistara News

Note Politics | ನೋಟಿನ ಮೇಲೆ ಲಕ್ಷ್ಮೀ, ಗಣೇಶ ಚಿತ್ರ, ಕೇಜ್ರಿವಾಲ್‌ ಹೇಳಿಕೆಗೆ ಬಿಜೆಪಿ ‘ಶಿವಾಜಿ ಫೋಟೊ’ ತಿರುಗೇಟು

Note

ಮುಂಬೈ: “ದೇಶದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವನ್ನು ತಪ್ಪಿಸಲು ನೋಟುಗಳ (Note Politics) ಮೇಲೆ ಲಕ್ಷ್ಮೀ, ಗಣೇಶನ ಚಿತ್ರ ಮುದ್ರಿಸಬೇಕು” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೀಡಿದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. “ನೋಟುಗಳ ಮೇಲೆ ಛತ್ರಪತಿ ಶಿವಾಜಿಯವರ ಭಾವಚಿತ್ರ ಸಮಂಜಸ” ಎಂದು ತಿರುಗೇಟು ನೀಡಿದೆ.

ಮಹಾರಾಷ್ಟ್ರ ಬಿಜೆಪಿ ನಾಯಕ ನಿತೀಶ್‌ ರಾಣೆ (Nitish Rane) ಅವರು 200 ರೂ. ಮುಖಬೆಲೆಯ ನೋಟಿನ ಮೇಲೆ ಶಿವಾಚಿತ್ರ ಚಿತ್ರ ಮುದ್ರಿಸಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ, “ಇದು ಸಮಂಜಸವಾಗಿದೆ” ಎಂದು ಒಕ್ಕಣೆ ಹಾಕುವ ಮೂಲಕ ಕೇಜ್ರಿವಾಲ್‌ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.

“ದೇಶದ ವಿತ್ತೀಯ ವ್ಯವಸ್ಥೆಯನ್ನು ಸುಧಾರಿಸಲು, ರೂಪಾಯಿ ಮೌಲ್ಯ ಹೆಚ್ಚಿಸಲು ನೋಟುಗಳ ಮೇಲೆ ಲಕ್ಷ್ಮೀ, ಗಣೇಶನ ಫೋಟೊ ಮುದ್ರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಆಲೋಚಿಸಬೇಕು. ಹಿಂದೂ ದೇವರ ಕೃಪೆಯಿಂದಾದರೂ ರೂಪಾಯಿ ಮೌಲ್ಯ ಹೆಚ್ಚಾಗಲಿ. ಇಂಡೋನೇಷ್ಯಾದಲ್ಲಿ ಇಂತಹ ಕ್ರಮ ಅನುಸರಿಸಬೇಕಾದರೆ, ಭಾರತದಲ್ಲೇಕೆ ಮಾಡಬಾರದು” ಎಂದು ಕೇಜ್ರಿವಾಲ್‌ ವ್ಯಂಗ್ಯ ಮಾಡಿದ್ದರು. ಇದಕ್ಕೆ ಬಿಜೆಪಿ ಆಕ್ರೋಶವನ್ನೂ ವ್ಯಕ್ತಪಡಿಸಿದೆ.

ಇದನ್ನೂ ಓದಿ | Arvind Kejriwal | ರೂಪಾಯಿ ಮೌಲ್ಯ ಕುಸಿತ ತಪ್ಪಿಸಲು ನೋಟ್ ಮೇಲೆ ಗಣೇಶ, ಲಕ್ಷ್ಮೀ ಚಿತ್ರ ಮುದ್ರಿಸಿ: ಕೇಜ್ರಿವಾಲ್ ಸಲಹೆ!

Exit mobile version