Site icon Vistara News

Air India: ಎಂಥಾ ದುರ್ವಿಧಿ; ವಿಮಾನ ಪರಿಶೀಲನೆ ವೇಳೆ ಬಿದ್ದು ಏರ್‌ ಇಂಡಿಯಾ ಎಂಜಿನಿಯರ್‌ ಸಾವು!

Air India Flight

Air India engineer falls to death at IGI Airport during maintenance work of plane

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಏರ್‌ ಇಂಡಿಯಾ (Air India) ಎಂಜಿನಿಯರ್‌ ಒಬ್ಬರು ವಿಮಾನದ ಪರಿಶೀಲನೆ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಏರ್‌ ಇಂಡಿಯಾ ಎಂಜಿನಿಯರಿಂಗ್‌ ಸರ್ವಿಸಸ್‌ ಲಿಮಿಟೆಡ್‌ನ (AIESL) ಸೀನಿಯರ್‌ ಸೂಪರಿಂಟೆಂಡೆಂಟ್‌ ಸರ್ವಿಸ್‌ ಎಂಜಿನಿಯರ್‌ ಆಗಿದ್ದ ರಾಮ್‌ ಪ್ರಕಾಶ್‌ ಸಿಂಗ್‌ (56) ಅವರು ಕುಸಿದು ಮೃತಪಟ್ಟಿದ್ದಾರೆ.

ರಾಮ್‌ ಪ್ರಕಾಶ್‌ ಸಿಂಗ್‌ ಅವರು ನವೆಂಬರ್‌ 6 ಹಾಗೂ 7ರ ತಡರಾತ್ರಿ ವಿಮಾನ ಪರಿಶೀಲನೆ ಮಾಡುತ್ತಿದ್ದರು. ರೆಡಾರ್‌ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದು ಸೇರಿ ಇಡೀ ವಿಮಾನದ ತಪಾಸಣೆ ಮಾಡುತ್ತಿದ್ದರು. ಇದೇ ವೇಳೆ ಅವರು ಕುಸಿದು ಮೆಟ್ಟಿಲಿನ ಮೇಲೆ ಬಿದ್ದಿದ್ದಾರೆ. ಮೆಟ್ಟಿಲಿನ ಮೇಲೆ ಬಿದ್ದು, ಕೆಳಗೆ ಉರುಳಿದ ಕಾರಣ ಅವರ ತಲೆಗೆ ಪೆಟ್ಟಾಗಿದೆ. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಮ್‌ ಪ್ರಕಾಶ್‌ ಸಿಂಗ್‌ ಅವರು ಕುಸಿದು ಬೀಳುತ್ತಲೇ ದೆಹಲಿಯ ಮೆದಾಂತ ಆಸ್ಪತ್ರೆಗೆ ಸಾಗಿಸಲಾಗಿದೆ. ಇದಾದ ಬಳಿಕ ಮಣಿಪಾಲ್‌ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Air India: ಒಬ್ಬಂಟಿ ಮಹಿಳಾ ಪ್ರಯಾಣಿಕರಿಗೆ ಏರ್‌ ಇಂಡಿಯಾ ವಿಮಾನದಲ್ಲಿ ಪರ್ಯಾಯ ಆಸನ ವ್ಯವಸ್ಥೆ!

ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಯಾವಾಗಲೂ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಒಬ್ಬಂಟಿ ಮಹಿಳಾ ಪ್ರಯಾಣಿಕರಿಗೆ ಸೀಟ್ ಹಂಚಿಕೆಯಲ್ಲಿ ಏರ್‌ ಇಂಡಿಯಾ ಅನುಕೂಲ ಕಲ್ಪಿಸುತ್ತಿದೆ. ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಮತ್ತು ತಾಯಂದಿರಿಗೆ ವಿಮಾನಗಳಲ್ಲಿ ಪರ್ಯಾಯ ಆಸನಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಏರ್ ಇಂಡಿಯಾ ಒದಗಿಸಲು ತೀರ್ಮಾನಿಸಿದೆ. ಅಂಥ ಪ್ರಯಾಣಿಕರಿಗೆ ಅನುಕೂಲಕ್ಕೆ ಹಜಾರ ಅಥವಾ ಕಿಟಕಿ ಆಸನವನ್ನು ನೀಡಬೇಕು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಆಚೆ ಈಚೆ ಇಬ್ಬರು ಪುರುಷರು ಇರುವ ಮಧ್ಯದ ಸೀಟಿನಲ್ಲಿ ಪ್ರಯಾಣಿಸಲು ಒಬ್ಬಂಟಿ ಮಹಿಳೆಯರು ತೀವ್ರ ಮುಜುಗರಪಡುತ್ತಾರೆ. ಹಾಗಾಗಿ, ಅವರು ಸೀಟು ಆಯ್ಕೆಯ ಅವಕಾಶ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಸೀನಿಯರ್‌ ಎಂಜಿನಿಯರ್‌ ಕುಸಿದು ಬಿದ್ದಿರುವುದು ಹಲವು ಪ್ರಶ್ನೆ ಮೂಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version