Site icon Vistara News

Air India: ಮಾರ್ಗಮಧ್ಯೆ ಏರ್​ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ; ಯೂಟರ್ನ್​ ತೆಗೆದುಕೊಂಡ ಪೈಲೆಟ್​​

Air India Express flight catches fire land in Abu Dhabi

#image_title

ನವ ದೆಹಲಿ: ಅಬುಧಾಬಿ ಏರ್​​ಪೋರ್ಟ್​​ನಿಂದ ಟೇಕ್​ಆಫ್​ ಆಗಿದ್ದ ಏರ್​ ಇಂಡಿಯಾ ಎಕ್ಸ್​​ಪ್ರೆಸ್​ ವಿಮಾನದಲ್ಲಿ ಮಾರ್ಗ ಮಧ್ಯೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದು ವಾಪಸ್​ ಅಬುಧಾಬಿಗೇ ಬಂದು ಲ್ಯಾಂಡ್​ ಆಗಿದೆ. ಏರ್​ ಇಂಡಿಯಾದ IX348 ವಿಮಾನ ಕೇರಳದ ಕ್ಯಾಲಿಕಟ್​ (ಈಗಿನ ಕೊಯಿಕ್ಕೋಡ್​​)ಗೆ ಹೊರಟಿತ್ತು. ಆದರೆ ಇದರ ಒಂದು ಎಂಜಿನ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದರಿಂದ ಪೈಲಟ್​​ ವಾಪಸ್​ ಅಬುಧಾಬಿಗೇ ಹೋಗಿ ಲ್ಯಾಂಡ್​ ಮಾಡಿಸಿದ್ದಾರೆ.

ಈ ವಿಮಾನದಲ್ಲಿ 184 ಪ್ರಯಾಣಿಕರು ಇದ್ದರು. ಒಂದು ಎಂಜಿನ್​​ನಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಕಿ ಹೊತ್ತಿಕೊಂಡಿದ್ದನ್ನು ಪೈಲಟ್​ ಗಮನಿಸಿದ್ದಾರೆ. ಅದಾದ ಬಳಿಕ ಮೈಕ್​​ನಲ್ಲಿ ಅನೌನ್ಸ್​ ಮಾಡಲಾಯಿತು ಮತ್ತು ಸುರಕ್ಷಿತವಾಗಿ ಅಬುಧಾಬಿಗೇ ಹೋಗಿ ಲ್ಯಾಂಡ್ ಮಾಡಿಸಲಾಯಿತು ಎಂದು ಏರ್​ ಇಂಡಿಯಾ ತಿಳಿಸಿದೆ. ಹೀಗೆ ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ವಿಮಾನ ಸಮುದ್ರ ಮಟ್ಟದಿಂದ ಸುಮಾರು 1000 ಅಡಿ ಎತ್ತರದಲ್ಲಿ ಸಂಚಾರ ಮಾಡುತ್ತಿತ್ತು.

ಜನವರಿ 30ರಂದು ಏರ್​ ಇಂಡಿಯಾ ವಿಮಾನವೊಂದು ಕೊಚ್ಚಿನ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಹೈಡ್ರಾಲಿಕ್ ಫೇಲ್​ ಆಗಿ ಸ್ವಲ್ಪ ನಿಯಂತ್ರಣ ತಪ್ಪಿತ್ತು. ಈ ವೇಳೆ ಏರ್​ಪೋರ್ಟ್​​ನಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು. 183 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ಅದೃಷ್ಟವಶಾತ್​ ಯಾರಿಗೂ ಏನೂ ಅಪಾಯ ಆಗಿರಲಿಲ್ಲ.

ಇದನ್ನೂ ಓದಿ:Air India: ಒಂದು ವ್ಹೀಲ್​ ಚೇರ್​ ಕೂಡ ಇಲ್ಲ; ಏರ್​ ಇಂಡಿಯಾದ್ದು ಅತ್ಯಂತ ಕಳಪೆ ಸೇವೆ ಎಂದು ಕಿಡಿ ಕಾರಿದ ಬಿಜೆಪಿ ನಾಯಕಿ ಖುಷ್ಬು

Exit mobile version