ನವದೆಹಲಿ: ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ (Air India Urination Case) ಮಾಡಿರುವ ಆರೋಪದಲ್ಲಿ ಜೈಲುಪಾಲಾಗಿರುವ ಶಂಕರ್ ಮಿಶ್ರಾಗೆ ದೆಹಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಒಂದು ಲಕ್ಷ ರೂ. ಬಾಂಡ್ ಮೇರೆಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಜೋತ್ ಸಿಂಗ್ ಭಲ್ಲಾ ಜಾಮೀನು ನೀಡಿದ್ದಾರೆ.
ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ಕುರಿತು ಮಹಿಳೆಯು ಬಳಿಕ ದೂರು ನೀಡಿದ್ದರು. ಡಿಜಿಸಿಎ ನಿರ್ದೇಶಕರಿಗೂ ಪತ್ರದ ಮೂಲಕ ಮಾಹಿತಿ ನೀಡಿದ್ದರು. ಇದಾದ ಬಳಿಕ ಶಂಕರ್ ಮಿಶ್ರಾ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ, ಶಂಕರ್ ಮಿಶ್ರಾ ಬೆಂಗಳೂರಿಗೆ ಬಂದಿದ್ದ. ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದ ಪೊಲೀಸರು ಕೊನೆಗೂ ಬೆಂಗಳೂರಿನಲ್ಲಿ ಶಂಕರ್ ಮಿಶ್ರಾನನ್ನು ಬಂಧಿಸಿದ್ದರು.
ಇದಕ್ಕೂ ಮೊದಲು ಶಂಕರ್ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ನಿರಾಕರಿಸಿತ್ತು. “ನಾಗರಿಕ ಪ್ರಜ್ಞೆ ಇಲ್ಲದೆ ಹೀಗೆ ವರ್ತಿಸಿರುವುದು ನಾಚಿಕೆಗೇಡು” ಎಂದು ಜರಿದಿತ್ತು. ಪ್ರಕರಣದಲ್ಲಿ ಏರ್ ಇಂಡಿಯಾಗೆ ಡಿಜಿಸಿಎ 30 ಲಕ್ಷ ರೂ. ದಂಡವನ್ನೂ ವಿಧಿಸಿದೆ.
ಇದನ್ನೂ ಓದಿ: Air India Urination Case | ನಾನು ಮೂತ್ರ ಮಾಡಿಲ್ಲ, ಮಹಿಳೆಯೇ ಮಾಡಿರಬಹುದು, ಶಂಕರ್ ಮಿಶ್ರಾ ಹೊಸ ವರಸೆ