ನವ ದೆಹಲಿ: ಟಾಟಾ ಗ್ರೂಪ್ನ ಏರ್ ಏಷ್ಯಾ ಇಂಡಿಯಾ(AirAsia (India) Ltd)ಕ್ಕೆ ಡಿಜಿಸಿಎ 20 ಲಕ್ಷ ರೂಪಾಯಿ (ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ) ದಂಡ ವಿಧಿಸಿದೆ. ಪೈಲೆಟ್ಗಳಿಗೆ ತರಬೇತಿ ನೀಡುವಾಗ ಅನುಸರಿಸಬೇಕಾದ ಹಲವು ಮುಖ್ಯ ನಿಯಮಗಳನ್ನು ಏರ್ ಏಷ್ಯಾ ಉಲ್ಲಂಘನೆ ಮಾಡಿದೆ ಎಂದು ಡಿಜಿಸಿಎ ಹೇಳಿದ್ದು, ಮುಖ್ಯ ತರಬೇತುದಾರನನ್ನು ಮೂರು ತಿಂಗಳು ಕಾಲ ಅಮಾನತು ಮಾಡಿದೆ. ಹಾಗೇ, ಎಂಟು ಮಂದಿ ಪರಿಶೀಲಕರಿಗೆ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಎಲ್ಲ ಮೊತ್ತ ಸೇರಿ, ಏರ್ ಏಷ್ಯಾ ಇಂಡಿಯಾಕ್ಕೆ ಡಿಜಿಸಿಎ ವಿಧಿಸಿದ ದಂಡದ ಮೊತ್ತ 44 ಲಕ್ಷ ರೂಪಾಯಿ.
ಕಡಿಮೆ ವೆಚ್ಚದ ವಾಹಕವಾಗಿರುವ ಈ ಏರ್ಏಷ್ಯಾ ಇಂಡಿಯಾ ವಿಮಾನವನ್ನು ಡಿಜಿಸಿಎ 2022ರ ನವೆಂಬರ್ 23-25ರವರೆಗೆ ಸತತವಾಗಿ ಕಣ್ಗಾವಲಿನಲ್ಲಿಟ್ಟು ಪರಿಶೀಲನೆ ನಡೆಸಿತ್ತು. ‘ಏರ್ ಏಷ್ಯಾ ಇಂಡಿಯಾ ಪೈಲೆಟ್ಗಳ ತರಬೇತಿ ವೇಳೆ ಪ್ರಮುಖ ನಿಯಮಗಳು ಉಲ್ಲಂಘನೆಯಾಗಿದೆ. ಪೈಲೆಟ್ ಪ್ರಾವೀಣ್ಯತೆ ಪರೀಕ್ಷೆ ಸೇರಿ ವಿವಿಧ ಪರಿಶೀಲನೆಗಳು ಮಾಡಲ್ಪಟ್ಟಿಲ್ಲ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಕೇಳುವ ಅಗತ್ಯಗಳನ್ನು ತರಬೇತಿಯಲ್ಲಿ ಹೇಳಿಕೊಡಲಿಲ್ಲ’ ಎಂದು ಡಿಜಿಸಿಎ ತಿಳಿಸಿದೆ.
ಇದನ್ನೂ ಓದಿ: Aero India 2023 : ಏಷ್ಯಾದ ಅತಿ ದೊಡ್ಡ ಏರ್‌ಶೋ, ಏರೋ ಇಂಡಿಯಾಗೆ ಬೆಂಗಳೂರು ಸಜ್ಜು, ಇಲ್ಲಿದೆ ಡಿಟೇಲ್ಸ್
ಇತ್ತೀಚೆಗಷ್ಟೇ ಟಾಟಾ ಸಮೂಹದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಎರಡು ಬಾರಿ ಡಿಜಿಸಿಎ ದಂಡ ವಿಧಿಸಿದೆ. ಹಾಗೇ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೂ ದಂಡ ಬಿದ್ದಿತ್ತು. ಇದೀಗ ಮತ್ತೊಂದು ವಿಮಾನಯಾನ ಸಂಸ್ಥೆಗೆ ಡಿಜಿಸಿಎ ದಂಡ ವಿಧಿಸಿದೆ.