Site icon Vistara News

Nepal Plane Crash | ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನ; ಹಲವರು ಮೃತಪಟ್ಟಿರುವ ಶಂಕೆ

aircraft crashes In Nepal Airport

ನೇಪಾಳದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್​​ವೇದಲ್ಲಿ ಪ್ರಯಾಣಿಕರ ವಿಮಾನವೊಂದು ಪತನಗೊಂಡಿದೆ. ಬಿದ್ದ ರಭಸಕ್ಕೆ ವಿಮಾನಕ್ಕೆ ಬೆಂಕಿ ಹೊತ್ತಿ ಉರಿದಿದೆ. ಈ ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಮತ್ತು 68 ಪ್ರಯಾಣಿಕರು ಇದ್ದರು. ಸದ್ಯ ಇವರೆಲ್ಲರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಹೆಚ್ಚಿನ ಪ್ರಯಾಣಿಕರು ಬದುಕುಳಿಯುವ ನಿರೀಕ್ಷೆಯಿಲ್ಲ ಎನ್ನಲಾಗಿದೆ. ಸದ್ಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಕಠ್ಮಂಡು ಮೂಲದ ಯೇತಿ ಏರ್​​ವೇಸ್​​ಗೆ ಸೇರಿದ ಎಟಿಆರ್​ 72 ಎಂಬ ವಿಮಾನ ಹೀಗೆ ಪತನಕ್ಕೀಡಾಗಿದ್ದು, ಕಠ್ಮಂಡುವಿನಿಂದ ಪೋಖರಾಕ್ಕೆ ಆಗಮಿಸಿತ್ತು.

ಇದನ್ನೂ ಓದಿ: Plane Crash | ತರಬೇತಿ ವಿಮಾನ ಪತನ, ಹಿರಿಯ ಪೈಲಟ್ ಸಾವು, ಮತ್ತೊಬ್ಬರಿಗೆ ತೀವ್ರ ಗಾಯ

Exit mobile version