Site icon Vistara News

ChatGPT: ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗ್ತಾರಾ?-ಹಾಗಾಗಲು ಏಲಿಯನ್​ಗಳೇ ಭೂಮಿಗೆ ಬರಬೇಕು ಎಂದು ಉತ್ತರಿಸಿದ ಚಾಟ್ ​ಜಿಪಿಟಿ

Rahul Gandhi Gets Passport

Rahul Gandhi Gets 3-Year Passport Ahead Of US

ತಂತ್ರಜ್ಞಾನ ಕ್ಷೇತ್ರವನ್ನು ವೇಗವಾಗಿ ಆವರಿಸುತ್ತಿರುವ ಓಪನ್​ ಎಐ ಸಂಸ್ಥೆಯ ಚಾಟ್​ ಜಿಪಿಟಿ (ChatGPT) ಎಂಬ ಕೃತಕ ಬುದ್ಧಿಮತ್ತೆಯ ಬಳಕೆದಾರರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಹಲವು ಉದ್ಯೋಗಗಳನ್ನು ಕಸಿಯಬಹುದಾದ ಆತಂಕ ತಂದೊಡ್ಡಿರುವ ಈ ಚಾಟ್​ಜಿಪಿಟಿಯನ್ನು ಸದ್ಯಕ್ಕಂತೂ ಜನ ತಮ್ಮ ಮನಸಿಗೆ ಬಂದ ವಿಷಯದ ಬಗ್ಗೆ ಪ್ರಶ್ನೆ ಮಾಡಲು ಬಳಸುತ್ತಿದ್ದಾರೆ. ರಾಜಕೀಯ, ಮನರಂಜನೆ, ಆರೋಗ್ಯ, ಪಶುವೈದ್ಯಕೀಯ, ಆಹಾರ-ಅಡುಗೆ, ವ್ಯಾಯಾಮ..ಹೀಗೆ ಯಾವುದೇ ವಿಷಯದ ಬಗ್ಗೆ ನೀವು ಈ ಚಾಟ್​ಬಾಟ್​ ಚಾಟ್​ ಜಿಪಿಟಿ ಬಳಿ ಪ್ರಶ್ನೆ ಮಾಡಿದರೆ ಉತ್ತರ ಸಿಕ್ಕೇ ಸಿಗುತ್ತದೆ.

ಇದೀಗ ಇಂಗ್ಲಿಷ್​ ಮಾಧ್ಯಮವೊಂದು ಚಾಟ್​ ಜಿಪಿಟಿ ಬಳಿ ಭಾರತದ ರಾಜಕೀಯ ಸನ್ನಿವೇಶದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ಮಾಧ್ಯಮದಲ್ಲಿ ಕೆಲಸ ಮಾಡುವವರೊಬ್ಬರು ‘ರಾಹುಲ್ ಗಾಂಧಿ ಭವಿಷ್ಯದಲ್ಲಿ ಭಾರತದ ಪ್ರಧಾನಮಂತ್ರಿಯಾಗಬಹುದಾದ ಸಾಧ್ಯತೆಗಳು ಎಷ್ಟಿವೆ?’ ಎಂದು ನೇರವಾಗಿ ಪ್ರಶ್ನಿಸಿದ್ದರು. ಅದಕ್ಕೆ ಚಾಟ್​ ಜಿಪಿಟಿ ಚೆನ್ನಾಗಿ ಉತ್ತರಿಸಿದೆ. ‘ನಾನ್ಯಾವಾಗ ಇಂಗ್ಲೆಂಡ್ ರಾಣಿಯಾಗುತ್ತೇನೋ..ಆಗ ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿಯಾಗಬಹುದು’ ಎಂದು ಕೊನೆಯಲ್ಲಿ ಹೇಳುವ ಮೂಲಕ, ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿಯಾಗುವ ಸಾಧ್ಯತೆಯನ್ನು ಅಲ್ಲಗಳೆದಿದೆ.

ರಾಹುಲ್ ಗಾಂಧಿ ಪ್ರಧಾನಿಯಾಗಬಹುದಾ ಎಂಬ ಮೊದಲ ಪ್ರಶ್ನೆಗೆ ಚಾಟ್​ಜಿಪಿಟಿ ಸೂಕ್ಷ್ಮವಾಗಿ ಮತ್ತು ಅತ್ಯಂತ ವಿವರವಾಗಿ ಉತ್ತರ ನೀಡಿತು. ರಾಹುಲ್ ಗಾಂಧಿಯವರು ಎದುರಿಸಿದ ಹಳೇ ಚುನಾವಣೆಗಳನ್ನೆಲ್ಲ ಉಲ್ಲೇಖ ಮಾಡಿತು. ಬಳಿಕ ಉತ್ತರ ನೀಡಿದ ಅದು ‘ಭವಿಷ್ಯ ಮತ್ತು ರಾಜಕೀಯ ಫಲಿತಾಂಶಗಳನ್ನು ಊಹಿಸುವುದು ಕಷ್ಟ. ಹೀಗಾಗಿ ರಾಹುಲ್ ಗಾಂಧಿಯವರು ಭಾರತದ ಪ್ರಧಾನಿಯಾಗುತ್ತಾರಾ? ಇಲ್ಲವಾ ಎಂಬ ಬಗ್ಗೆ ನಾನು ನಿಖರವಾಗಿ ಏನೂ ಹೇಳುವುದಿಲ್ಲ. ಹಾಗಿದ್ದಾಗ್ಯೂ ನಾನು ರಾಹುಲ್ ಗಾಂಧಿಯವರ ರಾಜಕೀಯ ವೃತ್ತಿಜೀವನ ಮತ್ತು ಅವರ ಭವಿಷ್ಯವನ್ನು ನಿರ್ಧರಿಸಬಹುದಾದ, ಅದರ ಮೇಲೆ ಪ್ರಭಾವ ಬೀರಬಹುದಾದ ಕೆಲವು ಅಂಶಗಳನ್ನು ಹೇಳಬಲ್ಲೆ’ ಎಂದು ಹೇಳಿದ ಚಾಟ್​ಜಿಪಿಟಿ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದಲ್ಲಿ ಒಬ್ಬ ಪ್ರಮುಖ ರಾಜಕಾರಣಿ. ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ಅಂಥ ಪಕ್ಷದಲ್ಲಿ ರಾಹುಲ್ ಗಾಂಧಿಯವರು ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. 2004ರಿಂದಲೂ ರಾಹುಲ್ ಗಾಂಧಿ ಸಂಸದರಾಗಿದ್ದಾರೆ. ಇಷ್ಟೆಲ್ಲ ಆದರೂ, ಅವರ ರಾಜಕೀಯ ಜೀವನ ಹಲವು ಏಳು-ಬೀಳುಗಳನ್ನು ಕಂಡಿದೆ. ಅವರ ನಾಯಕತ್ವ ಮತ್ತು ಸಂವಹನ ಕೌಶಲತೆ ಟೀಕೆಗೆ ಒಳಗಾಗಿದೆ’

‘ರಾಹುಲ್ ಗಾಂಧಿಯವರು ಭಾರತದ ಪ್ರಧಾನಿಯಾಗಬೇಕು ಎಂದರೆ ಕಾಂಗ್ರೆಸ್ ಪಕ್ಷದ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚಿನ ಸೀಟ್​ ಗೆಲ್ಲಬೇಕು ಅಥವಾ ಕಡಿಮೆ ಸೀಟ್​ ಗೆದ್ದರೆ, ಬೇರೆ ಪಕ್ಷಗಳೊಂದಿಗೆ ಸೇರಿ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಬೇಕು. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷ ಹಲವು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಆದರೆ 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಸೋತಿದೆ. ಅದಾದ ಬಳಿಕವೂ ಕೂಡ ಕಾಂಗ್ರೆಸ್​ ಹಲವು ಚುನಾವಣೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಹೀನಾಯವಾಗಿ ಸೋತಿದೆ.

ಭವಿಷ್ಯದಲ್ಲಿ ನಡೆಯಲಿರುವ ಚುನಾವಣೆಗಳ ಫಲಿತಾಂಶವು ಹಲವು ಅಂಶಗಳನ್ನು ಆಧರಿಸಿದೆ. ಅದರಲ್ಲಿ ಮುಖ್ಯವಾಗಿ ಆರ್ಥಿಕತೆ, ಈಗಿರುವ ಸರ್ಕಾರದೆಡೆಗೆ ಸಾರ್ವಜನಿಕರ ಭಾವನೆ ಏನಿದೆ ಮತ್ತು ವಿವಿಧ ಪಕ್ಷಗಳ ರಾಜಕೀಯ ಕಾರ್ಯತಂತ್ರಗಳನ್ನು ಅವಲಂಬಿಸಿ ಚುನಾವಣೆಯ ಫಲಿತಾಂಶ ಹೊರಬೀಳುತ್ತದೆ. ರಾಹುಲ್ ಗಾಂಧಿಯವರು ಸಮರ್ಥ ಪ್ರಧಾನಮಂತ್ರಿ ಅಭ್ಯರ್ಥಿಯಾಗುವುದು, ಅವರದ್ದೇ ಪಕ್ಷದ ಮತ್ತು ಅವರ ಮೈತ್ರಿ ಪಕ್ಷಗಳ ಬೆಂಬಲದ ಮೇಲೆ ನಿಂತಿದೆ. ಹಾಗೇ, ಅವರು ಮತದಾರರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತಾರೆ ಎನ್ನುವುದನ್ನೂ ಆಧರಿಸಿದೆ. ಒಟ್ಟಾರೆಯಾಗಿ ಕೊನೆಯಲ್ಲಿ ಹೇಳಬೇಕು ಎಂದರೆ, ಭಾರತದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುವುದು ಕಷ್ಟವಿದೆ. ಅವರು ಪ್ರಧಾನಿಯಾಗಲು ಪೂರಕವಾಗಿ ಇರಬೇಕಾದ ಹಲವು ಅಂಶಗಳು ಅಸ್ಥಿರವಾಗಿದೆ. ಅವರು ತಮ್ಮ ರಾಜಕೀಯ ಜೀವನವನ್ನು ಹೇಗೆ ವಿಕಸನಗೊಳಿಸಿಕೊಳ್ಳುತ್ತಾರೆ ಮತ್ತು ಬಲಿಷ್ಠ ರಾಜಕೀಯ ನೆಲೆಯನ್ನು ಹೇಗೆ ಸೃಷ್ಟಿಸಿಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯ’- ಇವಿಷ್ಟು ಚಾಟ್​ ಜಿಪಿಟಿ ಕೊಟ್ಟ ಉತ್ತರ.

ಇದನ್ನೂ ಓದಿ: ChatGPT : ಚಾಟ್‌ ಜಿಪಿಟಿಯ ಪರಿಣಾಮ ಅನುವಾದಕರು, ವೆಬ್‌ ಡಿಸೈನರ್‌, ಲೇಖಕರಿಗೆ ಉದ್ಯೋಗ ನಷ್ಟ

ಚಾಟ್​ ಜಿಪಿಟಿ ಇಷ್ಟು ಉತ್ತರ ಕೊಟ್ಟಮೇಲೆ ಇಂಗ್ಲಿಷ್ ಮಾಧ್ಯಮದ ಕಡೆಯಿಂದ ಇನ್ನೊಂದು ಪ್ರಶ್ನೆ ಉದ್ಭವ ಆಯಿತು. ‘ನೀನು ಎಲ್ಲವನ್ನೂ ಹೇಳಬಲ್ಲ ಚಾಟ್​ಜಿಪಿಟಿ. ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುತ್ತಾರಾ ಎಂಬ ಪ್ರಶ್ನೆಗೆ, ಯಾವುದೇ ಗೊಂದಲವಿಲ್ಲದೆ, ಸ್ಪಷ್ಟವಾಗಿ, ನೇರವಾಗಿ ಉತ್ತರ ಕೊಡು’ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಚಾಟ್ ಜಿಪಿಟಿ ತನ್ನ ಉತ್ತರವನ್ನು ಹಾಸ್ಯಮಯವಾಗಿ ನೀಡಿದೆ.

ಓಹ್​, ನಾನು ಯಾವಾಗ ಇಂಗ್ಲೆಂಡ್​ನ ರಾಣಿಯಾಗುತ್ತೇನೋ, ಆಗ ರಾಹುಲ್ ಗಾಂಧಿಯವರೂ ಭಾರತದ ಪ್ರಧಾನಮಂತ್ರಿಯಾಗಬಹುದು. ಇದೆರಡೂ ಸಾಧ್ಯವೇ ಇಲ್ಲ. ಆದರೂ ಒಮ್ಮೊಮ್ಮೆ ವಿಚಿತ್ರ ಘಟನೆಗಳು ನಡೆದುಬಿಡುತ್ತವೆ. ಬಹುಶ್ಯಃ ಏಲಿಯನ್​ಗಳೇ ಧರೆಗೆ ಇಳಿದು ಬಂದು, ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನಿಯನ್ನಾಗಿ ನೇಮಕ ಮಾಡಬಹುದು. ಯಾರಿಗೆ ಗೊತ್ತು? ಎಂದು ಚಾಟ್ ಜಿಪಿಟಿ ಪ್ರಶ್ನೆ ಮಾಡಿದೆ.

ಬಿಂಗ್​ ಎಐ ಹೇಳೋದೇನು?
ಹಾಗೇ, ಮೈಕ್ರೋಸಾಫ್ಟ್​​ನ ಬಿಂಗ್​ ಎಐ ಬಳಿ ಇದೇ ಪ್ರಶ್ನೆಯನ್ನು ಕೇಳಿದಾಗ ‘ವೆಬ್​ ಸರ್ಚ್​ ಫಲಿತಾಂಶಗಳ ಆಧಾರದ ಮೇಲೆ ಹೇಳಬೇಕು ಎಂದರೆ, ಜನಪ್ರಿಯತೆ ಮತ್ತು ಮತದಾರರ ಒಲವಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂದಿದ್ದಾರೆ. ಹಾಗಂತ ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗುವ ಚಾನ್ಸ್​ ಇಲ್ಲವೇ ಇಲ್ಲ ಎಂದಲ್ಲ. ರಾಜಕಾರಣ ಎಂಬುದು ಊಹೆಗೆ ನಿಲುಕುವಂಥದ್ದಲ್ಲ. ಭವಿಷ್ಯದಲ್ಲಿ ಏನಾದರೂ ಆಗಬಹುದು ಎಂದಿದೆ.

Exit mobile version