ಜೈಪುರ: ರಾಹುಲ್ ಗಾಂಧಿ ಅವರು ಇತ್ತೀಚೆಗೆ ಭಾರತ್ ಜೋಡೊ ಯಾತ್ರೆ ವೇಳೆ ೪೦ ಸಾವಿರ ರೂ.ಗಿಂತಲೂ ಅಧಿಕ ಮೌಲ್ಯದ ಟಿ ಶರ್ಟ್ (Cloth Politics) ಧರಿಸಿದ ಕುರಿತು ಬಿಜೆಪಿಯು ಟೀಕಿಸಿದ ಬೆನ್ನಲ್ಲೇ ಕಾಂಗ್ರೆಸ್ ತಿರುಗೇಟು ನೀಡಿದೆ. “ಅಮಿತ್ ಶಾ ಅವರು ಸುಮಾರು ೮೦ ಸಾವಿರ ರೂ. ಮೌಲ್ಯದ ಮಫ್ಲರ್ ಧರಿಸುತ್ತಾರೆ” ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟಾಂಗ್ ನೀಡಿದ್ದಾರೆ.
“ಬಿಜೆಪಿಯು ಟಿ ಶರ್ಟ್ ವಿಷಯದಲ್ಲೂ ರಾಜಕೀಯ ಮಾಡುತ್ತಿದೆ. ಅಷ್ಟಕ್ಕೂ, ಬಿಜೆಪಿಯವರಿಗೆ ಭಾರತ್ ಜೋಡೊ ಯಾತ್ರೆಯಿಂದ ಏನು ತೊಂದರೆಯಾಗುತ್ತಿದೆ? ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ೮೦ ಸಾವಿರ ರೂ. ಮೌಲ್ಯದ ಮಫ್ಲರ್ ಧರಿಸುತ್ತಾರೆ. ಅಷ್ಟೇ ಏಕೆ, ಬಿಜೆಪಿಯ ಕೆಲ ನಾಯರು ೨.೫ ಲಕ್ಷ ರೂ. ಮೌಲ್ಯದ ಸನ್ ಗ್ಲಾಸ್‌ಗಳನ್ನು ಹಾಕಿಕೊಳ್ಳುತ್ತಾರೆ” ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರು ತಮ್ಮ ಕೆಲಸ ಮಾಡುವುದನ್ನು ಬಿಟ್ಟಿದ್ದಾರೆ. ರಾಹುಲ್ ಗಾಂಧಿ ಅವರನ್ನು ಟೀಕಿಸುವುದೇ ಅವರ ಕೆಲಸವಾಗಿದೆ” ಎಂದು ಟೀಕಿಸಿದ್ದಾರೆ. ಕಳೆದ ವಾರ ರಾಹುಲ್ ಗಾಂಧಿ ಅವರು ೪೧ ಸಾವಿರ ರೂ. ಮೌಲ್ಯದ ಟಿ ಶರ್ಟ್ ಧರಿಸಿದ್ದರ ಕುರಿತು ಬಿಜೆಪಿಯ ಹಲವು ನಾಯಕರು ಟೀಕಿಸಿದ್ದರು.
ಇದನ್ನೂ ಓದಿ | Bharat Jodo Yatra | ರಾಹುಲ್ ಗಾಂಧಿ ಟಿ ಶರ್ಟ್ ಬೆಲೆ 41 ಸಾವಿರ! ಬಿಜೆಪಿ-ಕಾಂಗ್ರೆಸ್ ಜಟಾಪಟಿ