ಬೆಂಗಳೂರು: ನಟ ರಜನಿಕಾಂತ್ ಅವರು ಕುಟುಂಬ ಸಮೇತರಾಗಿ ಅನಂತ್ ಅಂಬಾನಿಯ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಭರ್ಜರಿಯಾಗಿ (Anant Ambani Wedding) ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಅವರ ಡ್ಯಾನ್ಸ್ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ. ಹಾಲಿವುಡ್ ಸೆಲೆಬ್ರಿಟಿಗಳು, ಬಾಲಿವುಡ್ ತಾರೆಯರು, ದಕ್ಷಿಣ ಭಾರತದ ಸಿನಿಮಾ ಮಂದಿ ಸೇರಿದಂತೆ ನೂರಾರು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ.ಜನಿಕಾಂತ್ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸೂಪರ್ ಸ್ಟಾರ್ಗಳ ಜೊತೆ ಅನಂತ್ ಅಂಬಾನಿ ಕೂಡ ಹೆಜ್ಜೆ ಹಾಕಿದ್ದಾರೆ. ಅವರ ಮದುವೆಯಲ್ಲಿ ತಾರಾ ಮೆರುಗು ತುಂಬಿದೆ.‘ತಲೈವಾ’ ರಜನಿಕಾಂತ್ ಜೊತೆ ಅವರ ಪತ್ನಿ ಲತಾ, ಮಗಳು ಸೌಂದರ್ಯಾ ಕೂಡ ಅನಂತ್ ಅಂಬಾನಿಯ ಮದುವೆಗೆ ಬಂದಿದ್ದಾರೆ ನಟ ರಜನಿಕಾಂತ್ ಅವರು ಕುಟುಂಬ ಸಮೇತರಾಗಿ ಅನಂತ್ ಅಂಬಾನಿಯ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಅವರ ಡ್ಯಾನ್ಸ್ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ. ರಜನಿಕಾಂತ್ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸೂಪರ್ ಸ್ಟಾರ್ಗಳ ಜೊತೆ ಅನಂತ್ ಅಂಬಾನಿ ಕೂಡ ಹೆಜ್ಜೆ ಹಾಕಿದ್ದಾರೆ. ರಜನಿಕಾಂತ್ ಜೊತೆ ಅವರ ಪತ್ನಿ ಲತಾ, ಮಗಳು ಸೌಂದರ್ಯಾ ಕೂಡ ಅನಂತ್ ಅಂಬಾನಿಯ ಮದುವೆಗೆ ಬಂದಿದ್ದಾರೆ.
ಇದನ್ನೂ ಓದಿ: Anant Ambani Wedding: ಕೌಟುಂಬಿಕ ಮುನಿಸು ಮರೆತು ವರನೊಂದಿಗೆ ಜತೆಯಾಗಿ ಹೆಜ್ಜೆ ಹಾಕಿದ ಮುಖೇಶ್ ಅಂಬಾನಿ-ಅನಿಲ್ ಅಂಬಾನಿ
ಗಣ್ಯರ ದಂಡೇ ಉಪಸ್ಥಿತಿ
ಅನಂತ್ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್ ಧೋನಿ, ಅಮಿತಾಭ್ ಬಚ್ಚನ್, ಆಲಿಯಾ ಭಟ್, ರಣವೀರ್ ಸಿಂಗ್, ರಣಬೀರ್ ಕಪೂರ್, ಅನನ್ಯಾ ಪಾಂಡೆ, ರಜನಿಕಾಂತ್, ಮಹೇಶ್ ಬಾಬು, ಹಾರ್ದಿಕ್ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್ ಮಾಜಿ ಪ್ರಧಾನಿಗಳಾದ ಬೋರಿಸ್ ಜಾನ್ಸನ್, ಟೋನಿ ಬ್ಲೇರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.
5 ಸಾವಿರ ಕೋಟಿ ರೂ. ಖರ್ಚು
ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್-ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.
ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದವು. ಭಾರತದ ಜಾಮ್ನಗರದಲ್ಲಿರುವ ಅಂಬಾನಿ ಎಸ್ಟೇಟ್ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.