Site icon Vistara News

Cow Hug Day: ಪ್ರೇಮಿಗಳ ದಿನದಂದು ‘ಗೋವುಗಳನ್ನು ಅಪ್ಪುವ ದಿನ’ ಆಚರಿಸಿ, ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ನೋಟಿಸ್

Cow Hug Day

#image_title

ನವದೆಹಲಿ: ದೇಶದಲ್ಲಿ ಪ್ರತಿ ಬಾರಿಯೂ ಹೊಸ ವರ್ಷಾಚರಣೆ (ಜನವರಿ ೧) ವೇಳೆ ಭಾರತದಲ್ಲಿ ಜನವರಿ ೧ರಂದು ಹೊಸ ವರ್ಷ ಆಚರಿಸಬೇಕೋ, ಯುಗಾದಿಗೆ ಹೊಸ ವರ್ಷಾಚರಣೆ ಎನ್ನಬೇಕೋ ಎಂಬ ಕುರಿತು ಚರ್ಚೆಗಳು ನಡೆಯುತ್ತವೆ. ದೇಶದ ಸಂಸ್ಕೃತಿಯ ಪ್ರಕಾರ ಯುಗಾದಿಯೇ ನಮಗೆ ಹೊಸ ವರ್ಷ ಎಂದು ಕೆಲವರು ವಾದ ಮಂಡಿಸಿದರೆ, ಇನ್ನು ಕೆಲವರು ಇದಾವುದನ್ನೂ ಲೆಕ್ಕಿಸದೆ ಜನವರಿ ೧ರಂದು ಪಾರ್ಟಿ ಮಾಡುತ್ತಾರೆ. ಈಗ ಪ್ರೇಮಿಗಳ ದಿನದಂದು ಕೂಡ ಇಂತಹದ್ದೇ ವಾದ ಕೇಳಿಬರುತ್ತಿದ್ದು, “ಪ್ರೇಮಿಗಳ ದಿನವಾದ ಫೆಬ್ರವರಿ ೧೪ರಂದು ಎಲ್ಲ ಗೋಪ್ರೇಮಿಗಳು ‘ಗೋವುಗಳನ್ನು ಅಪ್ಪಿಕೊಳ್ಳುವ ದಿನ’ವನ್ನಾಗಿ (Cow Hug Day) ಆಚರಿಸಬೇಕು ಎಂದು ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ (Animal Welfare Board) ಅಧಿಸೂಚನೆ ಹೊರಡಿಸಿದೆ.

“ಭಾರತವು ಸನಾತನ ಸಂಸ್ಕೃತಿಯನ್ನು ಹೊಂದಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಆಚರಣೆಗಳಿಂದಾಗಿ ದೇಶದ ಸಂಸ್ಕೃತಿ-ಸಂಪ್ರದಾಯಗಳು ನಶಿಸಿಹೋಗುತ್ತಿವೆ. ಅದರಲ್ಲೂ, ದೇಶದ ಆರ್ಥಿಕತೆ, ಕೃಷಿ, ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಗೋವುಗಳನ್ನು ಕಡೆಗಣಿಸಲಾಗುತ್ತದೆ. ಹಾಗಾಗಿ, ಫೆಬ್ರವರಿ ೧೪ರಂದು ಎಲ್ಲ ಗೋಪ್ರೇಮಿಗಳು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಬೇಕು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

“ಗೋವುಗಳನ್ನು ತಬ್ಬಿಕೊಳ್ಳುವುದರಿಂದ ಭಾವನಾತ್ಮಕ ಸಿರಿವಂತಿಕೆ ಹೆಚ್ಚಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ಸಿಗುತ್ತದೆ. ಸಕಾರಾತ್ಮಕ ಮನೋಭಾವವೂ ಒಡಮೂಡುತ್ತದೆ. ಗೋವುಗಳು ಮನುಷ್ಯನಿಗೆ ತಾಯಿಯಷ್ಟೇ ಪ್ರೀತಿ ನೀಡುತ್ತವೆ. ಹಾಗಾಗಿಯೇ, ಅವುಗಳನ್ನು ಗೋಮಾತೆ, ಕಾಮಧೇನು ಎಂಬುದಾಗಿ ಕರೆಯಲಾಗುತ್ತದೆ” ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Valentine’s Week : ಪ್ರೇಮಿಗಳ ದಿನದ ಹಿಂದಿನ ಮಹತ್ವವೇನು? ಆಚರಿಸೋದು ಹೇಗೆ?

Exit mobile version