Site icon Vistara News

Golden Temple: ಪಂಜಾಬ್ ಸ್ವರ್ಣಮಂದಿರದ ಬಳಿ ಮತ್ತೊಂದು ಸ್ಫೋಟ; ಸ್ಥಳದಲ್ಲಿ ಆತಂಕ

Another Blast Near Golden Temple of Punjab

#image_title

ಪಂಜಾಬ್​​ನ ಗೋಲ್ಡನ್​ ಟೆಂಪಲ್​ (ಸ್ವರ್ಣಮಂದಿರ) (Golden Temple) ಸಮೀಪದ ಹೆರಿಟೇಜ್​ ಸ್ಟ್ರೀಟ್​​ನಲ್ಲಿ ಇಂದು ಮುಂಜಾನೆ ಮತ್ತೊಂದು ಸ್ಪೋಟವಾಗಿದೆ (Blast At Golden Temple). ಸ್ವರ್ಣಮಂದಿರದ ಬಳಿಯ ಸಾರಾಗಢಿ ನಿವಾಸದ ಸಮೀಪ ಪಾರ್ಕಿಂಗ್ ಏರಿಯಾದಲ್ಲಿ ಶನಿವಾರ ತಡರಾತ್ರಿ ಸ್ಫೋಟವುಂಟಾಗಿ 6 ಮಂದಿಗೆ ಗಾಯವಾಗಿತ್ತು. ಈಗ ಮತ್ತೆ ಬಹುತೇಕ ಅದೇ ಸ್ಥಳದಲ್ಲಿ ಸ್ಫೋಟವಾಗಿದೆ. ಶನಿವಾರ ನಡೆದ ಸ್ಫೋಟ ಗ್ಯಾಸ್​ ಪೈಪ್​ನಿಂದ ಆಗಿದ್ದರಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಇಂದು ಉಂಟಾದ ಸ್ಫೋಟ ಯಾವ ಮಾದರಿಯದ್ದು ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.

ಸದ್ಯ ಸ್ಥಳದಲ್ಲಿ ಬಾಂಬ್​ ನಿಷ್ಕ್ರಿಯ ದಳದವರು, ವಿಧಿವಿಜ್ಞಾನ ತಂಡಗಳು ಪರಿಶೀಲನೆ ನಡೆಸುತ್ತಿವೆ. ಇಂದು ಮುಂಜಾನೆ 6.30ರ ಹೊತ್ತಿಗೆ ದೊಡ್ಡಮಟ್ಟದ ಸ್ಫೋಟವುಂಟಾಗಿದ್ದಾಗಿ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಇನ್ನು ಗ್ರೀನ್​ ಬೆಲ್ಟ್​, ಒಳಚರಂಡಿ ಮಾರ್ಗಗಳು ಮತ್ತಿತರ ಕಡೆಗಳಲ್ಲಿ, ಎಲ್ಲೆಲ್ಲಿ ಬಾಂಬ್​ ಮತ್ತಿತರ ಸ್ಫೋಟಕಗಳನ್ನು ಅಡಗಿಸಿ ಇಡಬಹುದೋ ಅಲ್ಲೆಲ್ಲ ತೀವ್ರ ಶೋಧ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಇನ್ನು ಸ್ಫೋಟಗಳು ನಡೆದ ಸ್ಥಳವನ್ನು ಪೊಲೀಸರು ಬ್ಲಾಕ್​ ಮಾಡಿಟ್ಟಿದ್ದಾರೆ.

ಇದನ್ನೂ ಓದಿ: Golden Temple: ಪಂಜಾಬ್​​ನ ಗೋಲ್ಡನ್​ ಟೆಂಪಲ್​​ ಸಮೀಪವೇ ಸ್ಫೋಟ; ಹಲವರಿಗೆ ಗಾಯ

ಶನಿವಾರ ತಡರಾತ್ರಿ ನಡೆದ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದರು. ಆಗಲೇ ಸ್ಥಳೀಯರಲ್ಲೆರೂ ಸಿಕ್ಕಾಪಟೆ ಗಾಬರಿಗೊಳಗಾಗಿದ್ದರು. ಎರಡನೇ ಸ್ಫೋಟದ ಬಳಿಕವಂತೂ ಮತ್ತಷ್ಟು ಆತಂಕದ ವಾತಾವರಣ ಮನೆ ಮಾಡಿದೆ. ಹಾಗಿದ್ದಾಗ್ಯೂ ಇದು ಯಾವುದೇ ಉಗ್ರದಾಳಿ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೊದಲ ಸ್ಫೋಟದಿಂದಾಗಿ ಸುತ್ತಲಿನ ರಸ್ಟೋರೆಂಟ್​, ಕಟ್ಟಡಗಳಿಗೆ ಸ್ವಲ್ಪ ಹಾನಿಯಾಗಿತ್ತು. ಈ ಬಾರಿಯ ಹಾನಿ ಪ್ರಮಾಣ/ಗಾಯಗೊಂಡವರ ಸಂಖ್ಯೆಯ ಬಗ್ಗೆ ಪೊಲೀಸರು ಇನ್ನೂ ಮಾಹಿತಿ ನೀಡಿಲ್ಲ.

Exit mobile version