ಹೈದರಾಬಾದ್: ತೆಲಂಗಾಣದ ಆಡಳಿತ ಪಕ್ಷ ಬಿಆರ್ಎಸ್ ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧ ಪೋಸ್ಟರ್ ಸಮರವನ್ನು ಮುಂದುವರಿಸಿದೆ. ಅಂತೆಯೇ ಭಾನುವಾರ ಸಿಐಎಸ್ಎಫ್ ರೈಸಿಂಗ್ ಡೇ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಗೃಹಮಂತ್ರಿ ಅಮಿತ್ ಶಾ (Amith Sha) ಅವರಿಗೂ ಪೋಸ್ಟರ್ ಸ್ವಾಗತ ನೀಡುವ ಮೂಲಕ ಲೇವಡಿ ಮಾಡಿದೆ. ಅದರಲ್ಲಿ ಬಿಜೆಪಿಯಲ್ಲಿರುವ ಭ್ರಷ್ಟರು ಶುಭ್ರಗೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕಾಗಿ ವಾಷಿಂಗ್ ಪೌಂಡರ್ ನಿರ್ಮಾದ ಐಕಾನಿಕ್ ಬಾಲಕಿಯ ಚಿತ್ರವನ್ನು ಬಳಸಿಕೊಂಡಿದ್ದಾರೆ.
ಎಎನ್ಐ ಶೇರ್ ಮಾಡಿರುವ ವಿಡಿಯೊ ಇಲ್ಲಿದೆ
ಡೆಲ್ಲಿ ಲಿಕ್ಕರ್ ಹಗರಣದಲ್ಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದು ಬಿಎಆರ್ಎಸ್ ನಾಯಕರನ್ನು ಕೆರಳಿಸಿದ್ದು, ಅಮಿತ್ ಶಾ ಹೈದರಾಬಾದ್ಗೆ ಆಗಮಿಸುವ ವೇಳೆ ದೊಡ್ಡ ಬ್ಯಾನರ್ ಹಾಕಿ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿಜೆಪಿ ನಾಯಕರ ಚಿತ್ರಗಳನ್ನು ಹಾಕಿ ಇವರೆಲ್ಲರೂ ಶುಭ್ರವಾಗಿದ್ದು ನಿರ್ಮಾ ಹಾಕಿ ತೊಳೆದ ಮೇಲೆಯೇ ಎಂದು ಪ್ರಶ್ನಿಸಿದ್ದಾರೆ. ಬ್ಯಾನರ್ನಲ್ಲಿ ಮಾಜಿ ಸಚಿವ ಈಶ್ವರಪ್ಪ, ಲೋಕಾಯುಕ್ತ ಬಲೆಗೆ ಬಿದ್ದಿರುವ ಬಿಜೆಪಿ ಮುಖಂಡ ಮಾಡಾಳ್ ವಿರೂಪಾಕ್ಷಪ್ಪ, ಮಹಾರಾಷ್ಟ್ರದ ಬಿಜೆಪಿ ನಾಯಕ ನಾರಾಯಣ್ ರಾಣೆ, ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ, ಜ್ಯೋತಿರಾಧಿತ್ಯ ಸಿಂಧ್ಯಾ ಮತ್ತಿತರರ ಚಿತ್ರಗಳಿವೆ.
ಬಿಎಆರ್ಎಸ್ ಶಾಸಕಿಯಾಗಿರುವ ಕವಿತಾ ಅವರನ್ನು ಶನಿವಾರ ಇಡಿ ಅಧಿಕಾರಿಗಳು ಸತತವಾಗಿ ವಿಚಾರಣೆ ನಡೆಸಿದ್ದರು. ಇದೇ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಯ ವಿರುದ್ಧ ಆಪ್ ಕೂಡ ಪೋಸ್ಟರ್ ಅಭಿಯಾನ ಆರಂಭಿಸಿದೆ. ಅವರು ವಾಷಿಂಗ್ ಪೌಡರ್ ಬಿಜೆಪಿ ಎಂಬ ಚಿತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಗಣಿ ಅಕ್ರಮ ಪ್ರಕಣದಲ್ಲಿ ಜೈಲು ಸೇರಿರುವ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಚಿತ್ರವೂ ಇದೆ.