Site icon Vistara News

Vipassana Meditation | ವಿಪಶ್ಯನ ಧ್ಯಾನದ ಮೊರೆಹೋದ ಕೇಜ್ರಿವಾಲ್‌, ಇನ್ನು ಅವರು ಮಾತಾಡೋದು ಮುಂದಿನ ವರ್ಷವೇ!

Arvind Kejriwal Vipassana Meditation

ನವದೆಹಲಿ: ರಾಜಕಾರಣಿಗಳು ಎಂದರೆ ಯಾವಾಗಲೂ ಮಾತನಾಡುವವರು, ಜೋರು ಧ್ವನಿಯಲ್ಲಿ ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವವರು, ಮಾತಿನಿಂದಲೇ ಜನರ ವಿಶ್ವಾಸ ಗಳಿಸುವುದು, ಮಾತನ್ನೇ ಬಂಡವಾಳ ಮಾಡಿಕೊಂಡವರು ಎಂಬಂತಾಗಿದೆ. ರಾಜಕಾರಣಿಗಳು ಕೂಡ ಇಂತಹ ಮಾತುಗಳನ್ನು ಬಹುತೇಕ ಸಂದರ್ಭದಲ್ಲಿ ನಿಜವಾಗಿಸುತ್ತಾರೆ. ಆದರೆ, ಇಂತಹ ಮಾತಿಗೆ ವಿರುದ್ಧ ಎಂಬಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ವಿಪಶ್ಯನ ಧ್ಯಾನದ (Vipassana Meditation) ಮೊರೆ ಹೋಗಿದ್ದಾರೆ. ಹಾಗಾಗಿ, ಅವರು ಇನ್ನೂ ಒಂದು ವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಧ್ಯಾನಸ್ಥರಾಗಿಯೇ ಇರುವುದರಿಂದ ಯಾರೊಂದಿಗೂ ಮಾತನಾಡುವುದಿಲ್ಲ.

ಧ್ಯಾನದ ಕುರಿತು ಟ್ವೀಟ್‌ ಮಾಡಿರುವ ಅವರು, “ನಾನು ಇಂದಿನಿಂದ ವಿಪಶ್ಯನ ಧ್ಯಾನ ಕೈಗೊಳ್ಳುತ್ತಿದ್ದೇನೆ. ನಾನು ವರ್ಷದಲ್ಲಿ ಒಮ್ಮೆಯಾದರೂ ಈ ಧ್ಯಾನ ಮಾಡುತ್ತೇನೆ. ಹಾಗಾಗಿ, ಮತ್ತೆ ಜನವರಿ 1ರಂದು ನಿಮ್ಮೆದುರು ಬರುತ್ತೇನೆ. 100 ವರ್ಷದ ಹಿಂದೆ ಭಗವಾನ್‌ ಬುದ್ಧ ಈ ಧ್ಯಾನವನ್ನು ಪರಿಚಯಿಸಿದ್ದಾರೆ. ನೀವು ಯಾವಾಗಲಾದರೂ ಈ ಧ್ಯಾನ ಮಾಡಿದ್ದೀರಾ? ಇದನ್ನು ಮಾಡುವುದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭವಿದೆ. ಹಾಗಾಗಿ ನೀವೂ ಮಾಡಿ” ಎಂಬುದಾಗಿ ಸಲಹೆ ನೀಡಿದ್ದಾರೆ.

ಏನಿದು ವಿಪಶ್ಯನ ಧ್ಯಾನ?
ದೇಶದ ಪುರಾತನ ಧ್ಯಾನಗಳಲ್ಲಿ ವಿಪಶ್ಯನ ಧ್ಯಾನವೂ ಒಂದಾಗಿದೆ. ಇದಕ್ಕೆ 2,500 ವರ್ಷಗಳ ಇತಿಹಾಸವಿದ್ದು, ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣ ಸಾಧಿಸಲು ವಿಪಶ್ಯನ ಧ್ಯಾನದ ಮೊರೆಹೋಗುತ್ತಾರೆ. ಇದನ್ನು ಮಾಡುವವರು ಮಾತನಾಡದೆ, ಸನ್ನೆ ಮಾಡದೆ, ಯಾವುದೇ ರೀತಿಯ ಸಂವಹನ ಸಾಧಿಸದೆ, ಕೇವಲ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ. ಕೇಜ್ರಿವಾಲ್‌ ಅವರು 2013ರ ದೆಹಲಿ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆ ವೇಳೆ ಬಿಡುವಿಲ್ಲದ ಪ್ರಚಾರ ಕೈಗೊಂಡ ಬಳಿಕ ವಿಪಶ್ಯನ ಧ್ಯಾನದ ಮೊರೆ ಹೋಗಿದ್ದರು.

ಇದನ್ನೂ ಓದಿ | ‘ನಾವು ಎತ್ತಿನ ಹಾಲು ಹಿಂಡಿದ್ದೇವೆ’-ಗುಜರಾತ್​​ನಲ್ಲಿ ಆಪ್​ 5 ಸೀಟ್​ ಗೆದ್ದಿದ್ದನ್ನು ಹೀಗೆ ವಿಶ್ಲೇಷಿಸಿದ ಅರವಿಂದ್ ಕೇಜ್ರಿವಾಲ್​

Exit mobile version