ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಗೆಲುವಿನತ್ತ ಹೆಜ್ಜೆಹಾಕುತ್ತಿದೆ. ಈಗಾಗಲೇ 155 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಶೇ.52ಕ್ಕೂ ಹೆಚ್ಚು ಮತ ಪಡೆದಿದೆ. ಇದೇ ಮೊದಲ ಬಾರಿಗೆ ಗುಜರಾತ್ನ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ, ಬಿಜೆಪಿ ವಿರುದ್ಧ ಸಮರ ಸಾರಿದ್ದ ಆಪ್ 6 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಗುಜರಾತ್ ಚುನಾವಣೆಯನ್ನು ಆಪ್ನ ಅರವಿಂದ್ ಕೇಜ್ರಿವಾಲ್ ತುಂಬ ಗಂಭೀರವಾಗಿ ಪರಿಗಣಿಸಿದ್ದರು. ಪದೇಪದೇ ಅಲ್ಲಿ ಪ್ರಚಾರ ಸಭೆ ನಡೆಸಿ, ಹಲವು ‘ಉಚಿತ’ ಭರವಸೆಗಳನ್ನು ನೀಡಿದ್ದರು. ಬಿಜೆಪಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು.
ಆದರೆ ಈಗ ಬಿಜೆಪಿ ಕೊರಳಿಗೆ ವಿಜಯದ ಮಾಲೆ ಬೀಳುತ್ತಿರುವ ಹೊತ್ತಲ್ಲಿ, ಅರವಿಂದ್ ಕೇಜ್ರಿವಾಲ್ರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಟ್ರೋಲ್ ಮಾಡಲಾಗುತ್ತಿದೆ. ಹಲವು ವ್ಯಂಗ್ಯ ಭರಿತ, ತಮಾಷೆಯುಕ್ತ ವಿಡಿಯೊಗಳ ಮೂಲಕ ಅವರನ್ನು ಟೀಕಿಸಲಾಗುತ್ತಿದೆ. ಅಷ್ಟೇ ಅಲ್ಲ, ಗುಜರಾತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದೆ, ಅಲ್ಲೇನೂ ತಯಾರಿಯನ್ನೂ ಮಾಡದ ಕಾಂಗ್ರೆಸ್ನ್ನು ಕೂಡ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಮೂಲಕ ಗುಜರಾತ್ನಲ್ಲಿ ಕಮಲದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.
ಇಲ್ಲಿದೆ ನೋಡಿ, ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಪಕ್ಷಗಳ ಕುರಿತಾದ ಕೆಲವು ಟ್ರೋಲ್ ವಿಡಿಯೊಗಳು..
ಇದನ್ನೂ ಓದಿ: Gujarat Election Results | ಕರ್ನಾಟಕದಲ್ಲೂ ಪ್ರಭಾವ ಎಂದ ಬಿಜೆಪಿ; ದಿಕ್ಸೂಚಿ ಅಲ್ಲ ಎಂದ ಕಾಂಗ್ರೆಸ್