ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸುಸಜ್ಜಿತ ಶಾಲೆಗಳನ್ನು ನಿರ್ಮಿಸಿದ್ದೇವೆ, ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳು ನಮ್ಮಲ್ಲಿವೆ ಎಂದು ಅರವಿಂದ ಕೇಜ್ರಿವಾಲ್ ಅವರು ಹಲವು ಬಾರಿ ಹೇಳುತ್ತಾರೆ. ಆದರೆ, ಆರ್‌ಟಿಇ ಮಾಹಿತಿ ಆಧರಿಸಿ ನ್ಯೂ ಡೆಲ್ಲಿ ಮುನ್ಸಿಪಲ್ ಕಮಿಟಿ (ಎನ್‌ಡಿಎಂಸಿ) ಸದಸ್ಯ ಕುಲಜೀತ್ ಎಸ್. ಚಾಹಲ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅರವಿಂದ ಕೇಜ್ರಿವಾಲ್ ಸಭೆ ಮಧ್ಯೆಯೇ ಎದ್ದು ಹೋಗಿದ್ದಾರೆ. ಈ ವಿಡಿಯೊ ವೈರಲ್ (Viral Video) ಆಗಿದೆ.
ಸಭೆಯಲ್ಲಿ ಮಾತನಾಡಿದ ಕುಲಜೀತ್, “ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶಾಸಕರ ಅನುದಾನದ ಹಣವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಅದರಲ್ಲೂ, ಶಾಲೆಗಳ ಅಭಿವೃದ್ಧಿಗೆ ಸರಿಯಾಗಿ ವಿನಿಯೋಗ ಆಗಿಲ್ಲ. ಹೀಗಂತ ಆರ್‌ಟಿಐ ಮಾಹಿತಿ ಲಭ್ಯವಾಗಿದೆ” ಎಂದು ಹೇಳಿದರು. ಇದಕ್ಕೆ ಒಂದು ಮಾತೂ ಉತ್ತರಿಸದ ಕೇಜ್ರಿವಾಲ್, ಹಾಗೆಯೇ ಎದ್ದು ಹೋಗಿದ್ದಾರೆ. ಮುಖ್ಯಮಂತ್ರಿ ವರ್ತನೆಗೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | Waqf Property | ಮುಂಬೈನಲ್ಲಿ ವಕ್ಫ್ ಆಸ್ತಿ ಕಬಳಿಸಿ ಮನೆ ನಿರ್ಮಿಸಿದರೇ ಅಂಬಾನಿ? ಕೇಜ್ರಿವಾಲ್ ಹೇಳಿದ್ದೇನು?