Site icon Vistara News

Asaduddin Owaisi | ಮೋದಿ ಅವರನ್ನು ಚೀತಾಗೆ ಹೋಲಿಸಿದ ಅಸಾದುದ್ದೀನ್ ಓವೈಸಿ, ಕಾರಣವೇನು?

Asaduddin Owaisi

ಜೈಪುರ: ದೇಶದಲ್ಲಿ ನಶಿಸಿ ಹೋಗಿರುವ ಚೀತಾಗಳ ಸಂತತಿಯ ಪುನರುಜ್ಜೀವನಕ್ಕೆ ಪ್ರಧಾನಿ ನರೇಂದ್ರ ಮೋದಿ (Asaduddin Owaisi) ನೇತೃತ್ವದ ಸರ್ಕಾರವು ಯೋಜನೆ ರೂಪಿಸಿದೆ. ಮೋದಿ ಅವರ ಜನ್ಮದಿನವಾದ ಸೆ.೧೭ರಂದೇ ಎಂಟು ಚೀತಾಗಳು ನಮೀಬಿಯಾದಿಂದ ಭಾರತಕ್ಕೆ ಆಗಮಿಸಲಿವೆ. ಇದರ ಮಧ್ಯೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ನರೇಂದ್ರ ಮೋದಿ ಅವರನ್ನು ಚೀತಾಗೆ ಹೋಲಿಸಿದ್ದಾರೆ.

ಎರಡು ದಿನಗಳ ಭೇಟಿಗಾಗಿ ರಾಜಸ್ಥಾನಕ್ಕೆ ತೆರಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ನರೇಂದ್ರ ಮೋದಿ ಅವರು ಗಂಭೀರ ವಿಷಯಗಳಿಂದ ನುಣುಚಿಕೊಳ್ಳುವುದರಲ್ಲಿ ಚೀತಾಗಿಂತ ಮುಂದಿರುತ್ತಾರೆ” ಎಂದು ಟಾಂಗ್‌ ನೀಡಿದರು.

“ನಾವು ನಿರುದ್ಯೋಗ, ಲಡಾಕ್‌ ಗಡಿಯಲ್ಲಿ ಚೀನಾದ ಆಕ್ರಮಣ ಸೇರಿ ಹಲವು ಗಂಭೀರ ವಿಷಯಗಳನ್ನು ಎತ್ತುತ್ತೇವೆ. ಹೀಗೆ, ಗಂಭೀರ ವಿಷಯ ಪ್ರಸ್ತಾಪಿಸುತ್ತಲೇ ಮೋದಿ ಅವರು ವಿಷಯಗಳಿಂದ ದೂರ ಓಡುತ್ತಾರೆ. ಇದರಲ್ಲಿ ಅವರು ಚೀತಾಗಳನ್ನೂ ಮೀರಿಸುತ್ತಾರೆ. ಸ್ವಲ್ಪ ನಿಧಾನವಾಗಿ ಓಡಿ ಎಂಬುದು ನಮ್ಮ ಮನವಿ” ಎಂದು ಓವೈಸಿ ಕುಟುಕಿದರು.

ಇದನ್ನೂ ಓದಿ | RSS and Mamata | ಆರ್‌ಎಸ್ಎಸ್ ಕೆಟ್ಟದ್ದಲ್ಲ… ಮಮತಾ ಹೇಳಿಕೆಯನ್ನು ಗೇಲಿ ಮಾಡಿದ ಓವೈಸಿ!

Exit mobile version