Site icon Vistara News

Lakhimpur Kheri Case: ಜೈಲಿನಿಂದ ಹೊರನಡೆದ ಕೇಂದ್ರ ಸಚಿವರ ಪುತ್ರ ಆಶೀಷ್​ ಮಿಶ್ರಾ

Lakhimpur Kheri case

ನವ ದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಯನ್ನು ವಿರೋಧಿಸಿ 2021ರ ಅಕ್ಟೋಬರ್​ನಲ್ಲಿ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ (Lakhimpur Kheri Case) ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಎಸ್​ಯುವಿ ಹರಿಸಿದ ಆರೋಪದಡಿ ಜೈಲು ಪಾಲಾಗಿದ್ದ ಆಶೀಷ್​ ಮಿಶ್ರಾ ಕೊನೆಗೂ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಜನವರಿ 25ರಂದು ಅವರಿಗೆ ಸುಪ್ರೀಂಕೋರ್ಟ್​ ಮಧ್ಯಂತರ ಜಾಮೀನು ನೀಡಿತ್ತು. ಮಧ್ಯಂತರ ಬೇಲ್​ ಸಿಕ್ಕ ನಂತರದ ಎಲ್ಲ ಪ್ರಕ್ರಿಯೆಗಳನ್ನೂ ಮುಗಿಸಿ ಅವರಿಂದ ಜೈಲಿನಿಂದ ಬಿಡುಗಡೆಯಾದರು.

ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾ ಅವರ ಪುತ್ರನಾದ ಆಶೀಷ್​ ಮಿಶ್ರಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 19ರಂದು ಪೂರ್ಣಗೊಳಿಸಿದ್ದ ಜಸ್ಟೀಸ್ ಸೂರ್ಯಕಾಂತ್ ಮತ್ತು ಜಸ್ಟೀಸ್ ಜೆ ಕೆ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿ, ಜನವರಿ 25ರಂದು ಜಾಮೀನು ಮಂಜೂರು ಮಾಡಿತ್ತು.

2020ರಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ಉತ್ತರ ಪ್ರದೇಶ, ಪಂಜಾಬ್​ಗಳಲ್ಲೆಲ್ಲ ರೈತರು ಅದರ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಸಿದ್ದರು. ಹೀಗೆ ಲಖೀಂಪುರ ಖೇರಿಯಲ್ಲಿ 2021ರ ಅಕ್ಟೋಬರ್​ 3ರಂದು ಪ್ರತಿಭಟನೆ ನಡೆಸುತ್ತಿದ್ದಾಗ ಆ ರೈತರ ಮೇಲೆ ಎಸ್​ಯುವಿ ಒಂದು ನುಗ್ಗಿತ್ತು. ತತ್ಪರಿಣಾಮ 8 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚುಜನ ಗಾಯಗೊಂಡಿದ್ದರು. ಆ ಎಸ್​ಯು ಚಲಾಯಿಸುತ್ತಿದ್ದವರು ಆಶೀಷ್​ ಮಿಶ್ರಾ ಎಂದು ಹೇಳಲಾಗಿತ್ತು. ಅದೇ ಪ್ರಕರಣದಲ್ಲಿ ಜೈಲು ಸೇರಿದ್ದ ಆಶೀಷ್​ ಮಿಶ್ರಾಗೆ ಹಿಂದೊಮ್ಮೆ ಅಲಹಬಾದ್​ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಮತ್ತೆ ಅವರ ವಿರುದ್ಧ ಅರ್ಜಿದಾರರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ 2022 ಏಪ್ರಿಲ್​​ನಲ್ಲಿ ಅವರು ಕೋರ್ಟ್​ಗೆ ಶರಣಾಗಿ ಜೈಲು ಪಾಲಾಗಿದ್ದರು.

ಇದನ್ನೂ ಓದಿ: Lakhimpur Kheri Case : ಕೇಂದ್ರ ಸಚಿವರ ಪುತ್ರ ಆಶೀಷ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

Exit mobile version