Site icon Vistara News

Tejas Express : ತೇಜಸ್ ಎಕ್ಸ್‌ಪ್ರೆಸ್ ರೈಲಿನ ಫೋಟೊ ಹಂಚಿಕೊಂಡ ರೈಲ್ವೆ ಸಚಿವ

#image_title

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. ರೈಲ್ವೆ ನಿಲ್ದಾಣಗಳ ಉನ್ನತೀಕರಣದಿಂದ, ವಂದೇ ಭಾರತ್ ರೈಲು ಹೀಗೆ ಹಲವಾರು ಯೋಜನೆಗಳು ಜಾರಿಯಾಗಿರುವುದನ್ನು ನಾವು ಕಂಡಿದ್ದೇವೆ. ಎಷ್ಟೋ ರೈಲುಗಳೂ ಕೂಡ ತಮ್ಮ ಗುಣಮಟ್ಟ ಹೆಚ್ಚಿಸಿಕೊಂಡು ಸುಖದಾಯಕ ಪ್ರಯಾಣವನ್ನು ಪ್ರಯಾಣಿಕರಿಗೆ ನೀಡಲಾರಂಭಿಸಿವೆ. ಅಂತದರಲ್ಲಿ ಒಂದಾಗಿರುವ ತೇಜಸ್ ಎಕ್ಸ್‌ಪ್ರೆಸ್ (Tejas Express) ರೈಲಿನ ಫೋಟೋವನ್ನು ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮ್ಮನನ್ನು ತಬ್ಬಿಕೊಂಡ ಮರಿ ಕೋತಿ; ಇದು ಕರುಳು ಹಿಂಡುವ ವಿಡಿಯೊ
ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇರುವ ಹಿಂದೆ ಸರಿಸಿಕೊಳ್ಳಬಹುದಾದಂತಹ ಸೀಟುಗಳ ಫೋಟೋವನ್ನು ಸಚಿವರು ಹಂಚಿಕೊಂಡಿದ್ದಾರೆ. ನಾಲ್ಕು ಸೀಟುಗಳ ಮಧ್ಯದಲ್ಲಿ ಟೇಬಲ್ ಇದ್ದು ಅದರಲ್ಲಿ ಚಿಕ್ಕದೊಂದು ಸ್ಕ್ರೀನ್ ಇರುವುದನ್ನೂ ಕಾಣಬಹುದಾಗಿದೆ. “ಇದು ತೇಜಸ್ ಎಕ್ಸ್‌ಪ್ರೆಸ್” ಎಂದು ಸಚಿವರು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.


ತೇಜಸ್ ಎಕ್ಸ್‌ಪ್ರೆಸ್ ಭಾರತದಲ್ಲಿ ಪರಿಚಯಿಸಲಾದ ಮೊದಲ ಸೆಮಿ-ಹೈ-ಸ್ಪೀಡ್ ಹವಾನಿಯಂತ್ರಿತ ರೈಲು. ಇದು ಸ್ವಯಂಚಾಲಿತ ಬಾಗಿಲುಗಳೊಂದಿಗೆ ಆಧುನಿಕ ಆನ್‌ಬೋರ್ಡ್ ಸೌಲಭ್ಯಗಳನ್ನು ಹೊಂದಿದೆ.


ಇದರ ನಡುವೆ ದಕ್ಷಿಣ ಮಧ್ಯ ರೈಲ್ವೆ ವಿಭಾಗವು ಚೆನ್ನೈ ಮತ್ತು ಮಧುರೈ ನಡುವೆ ಚಲಿಸುವ ತೇಜಸ್ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 26ರಿಂದ ತಾಂಬರಂ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ ಎಂದು ಘೋಷಿಸಿದೆ. ತೇಜಸ್ ಎಕ್ಸ್‌ಪ್ರೆಸ್ (ನಂ.22671) ಪ್ರತಿದಿನ ಬೆಳಗ್ಗೆ 6 ಗಂಟೆಗೆ ಚೆನ್ನೈ ಎಗ್ಮೋರ್ ನಿಲ್ದಾಣದಿಂದ ಹೊರಡುತ್ತದೆ. ಮಧ್ಯಾಹ್ನ 12.15ಕ್ಕೆ ಮಧುರೈ ತಲುಪುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ, ರೈಲು(ನಂ. 22672) ಮಧುರೈನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 9.15 ಕ್ಕೆ ಚೆನ್ನೈ ಎಗ್ಮೋರ್ ರೈಲು ನಿಲ್ದಾಣ ತಲುಪುತ್ತದೆ. ಪ್ರಸ್ತುತ ಈ ಎರಡು ರೈಲುಗಳು ತಿರುಚ್ಚಿ ಮತ್ತು ದಿಂಡಿಗಲ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತಿವೆ. ಆದಾಗ್ಯೂ, ಈ ಚೆನ್ನೈ-ಮಧುರೈ-ಚೆನ್ನೈ ತೇಜಸ್ ಎಕ್ಸ್‌ಪ್ರೆಸ್ ಈಗ ಆರು ತಿಂಗಳ ಕಾಲ ತಾಂಬರಂ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ ಎಂದು ದಕ್ಷಿಣ ಮಧ್ಯ ರೈಲ್ವೆ ಆಯೋಗಗಳ ಜಂಟಿ ನಿರ್ದೇಶಕರು ಪ್ರಕಟಿಸಿದ್ದಾರೆ.

Exit mobile version