Site icon Vistara News

Best Police station | ಒಡಿಶಾದ ಅಸ್ಕಾ ದೇಶದ ಅತ್ಯುತ್ತಮ ಪೊಲೀಸ್ ಠಾಣೆ!

Aska Police Station

ನವದೆಹಲಿ: ದೇಶದ ಮೂರು ಅತ್ಯುತ್ತಮ ಠಾಣೆಗಳ ಪೈಕಿ ಒಡಿಶಾದ ಗಂಜಮ್ ಜಿಲ್ಲೆಯ ಅಸ್ಕಾ ಪೊಲೀಸ್ ಠಾಣೆಯೂ (Best Police station) ಒಂದಾಗಿದೆ. ಕೇಂದ್ರ ಗೃಹ ಸಚಿವಾಲವು 2022ರ ಸಾಲಿನ ಬೆಸ್ಟ್ ಪೊಲೀಸ್ ಸ್ಟೇಷನ್‌ಗಳ ಪಟ್ಟಿ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ತಿಂಗಳಾಂತ್ಯಕ್ಕೆ ದಿಲ್ಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ರೋಫಿಯನ್ನು ಅಸ್ಕಾ ಠಾಣೆಯ ಪೊಲೀಸ್ ಅಧಿಕಾರಿಗೆ ಟ್ರೋಫಿ ಹಸ್ತಾಂತರಿಸಲಿದೆ. ಗುಪ್ತಚರ ವಿಭಾಗದ ಜಂಟಿ ನಿರ್ದೇಶಕ ತರುಣ್ ಕುಮಾರ್ ಅವರು ಮೂರು ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ಅಸ್ಕಾವನ್ನು ಆಯ್ಕೆ ಮಾಡುವ ಬಗ್ಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಸುನಿಲ್ ಕುಮಾರ್ ಬನ್ಸಾಲ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ದೇಶದ ಮೂರು ಅತ್ಯುತ್ತಮ ಠಾಣೆಗಳಲ್ಲಿ ಅಸ್ಕಾ ಒಂದು ಎಂಬುದು ತಿಳಿಯುತ್ತಿದ್ದಂತೆ ಒಡಿಶಾ ಮುಖ್ಯಂತ್ರಿ ನವೀನ್ ಪಟ್ನಾಯಕ್ ಅವರು ಟ್ವೀಟ್ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯು, ಪ್ರತಿ ವರ್ಷ ದೇಶದ ಅತ್ಯುತ್ತಮ ಠಾಣೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಒಟ್ಟು 165 ಮಾನದಂಡಗಳನ್ನು ಅಳವಡಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ | ಆರಕ್ಷಕ ಜನಸ್ನೇಹಿ ಗ್ರಂಥಾಲಯ | ಪೊಲೀಸ್ ಠಾಣೆಯಲ್ಲಿ ಪ್ರಾರಂಭವಾಯ್ತು ಮೊದಲ ಲೈಬ್ರರಿ; ಪಬ್ಲಿಕ್‌ಗೂ ಇದೆ ಫ್ರೀ ಎಂಟ್ರಿ

Exit mobile version