ನವದೆಹಲಿ: ಕೇಂದ್ರ ಸರ್ಕಾರವು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Assam CM Himanta Biswa Sarma) ಅವರಿಗೆ ಭದ್ರತೆಯನ್ನು ಹೆಚ್ಚಿಸಿದೆ. ಈವರೆಗೆ ಅವರಿಗೆ ಜೆಡ್ ಸೆಕ್ಯುರಿಟಿ ಒದಗಿಸಲಾಗಿತ್ತು. ಅದನ್ನೀಗ ಕೇಂದ್ರ ಸರ್ಕಾರವು ಜೆಡ್ ಪ್ಲಸ್‌ಗೆ ಅಪ್‌ಗ್ರೇಡ್ ಮಾಡಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯವು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ಭದ್ರತೆಯನ್ನು ಪರಿಶೀಲಿಸಲಾಗಿದೆ. ಭದ್ರತಾ ಪಡೆಗಳ ಜತೆ ಚರ್ಚೆ ನಡೆಸಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರಿಗೆ ಈಗ ಜೆಡ್ ಕೆಟಗರಿ ಭದ್ರತೆಯನ್ನು ನೀಡಲಾಗುತ್ತಿತ್ತು. ಅದನ್ನು ಜೆಡ್ ಪ್ಲಸ್‌ಗೆ ಹೆಚ್ಚಿಸಲಾಗುತ್ತಿದೆ. ಈಶಾನ್ಯ ಸಿಆರ್‌ಪಿಎಫ್ ಈಗ ಅವರಿಗೆ ದೇಶ ಪೂರ್ತಿ ಭದ್ರತೆಯನ್ನು ಒದಗಿಸಲಿದೆ ಎಂದು ತಿಳಿಸಲಾಗಿದೆ.
ಭಾರತದಲ್ಲಿ ಗಣ್ಯ ವ್ಯಕ್ತಿಗಳಿಗೆ ವಿವಿಧ ಶ್ರೇಣಿಗಳಲ್ಲಿ ಭದ್ರತೆಯನ್ನು ಒದಗಿಸಲಾಗುತ್ತದೆ. ಭದ್ರತೆಯ ಶ್ರೇಣಿಯನ್ನು ಎಕ್ಸ್, ವೈ, ವೈ ಪ್ಲಸ್, ಜೆಡ್ ಮತ್ತು ಜೆಡ್ ಪ್ಲಸ್ ಎಂದು ವರ್ಗೀಕರಿಸಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ದೇಶದ ಅತಿದೊಡ್ಡ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ಗಣ್ಯ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸುತ್ತದೆ.
ಇದನ್ನೂ ಓದಿ | Viral Video | ಅಸ್ಸಾಮ್ ಸಿಎಂ ಮುಂದಿದ್ದ ಮೈಕ್ ಕಿತ್ತೆಸೆದ ತೆಲಂಗಾಣದ ವ್ಯಕ್ತಿ