Site icon Vistara News

ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ಥಳಿತ; ಪಾದ್ರಿ, ನನ್​ ಸೇರಿ ನಾಲ್ವರ ವಿರುದ್ಧ ಕೇಸ್​ ದಾಖಲು, ಪ್ರಿನ್ಸಿಪಾಲ್ ಅರೆಸ್ಟ್​

Principal Arrest

#image_title

ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯಲ್ಲಿರುವ ಶಾಲೆಯ ಪಾದ್ರಿ, ನನ್​, ಪ್ರಿನ್ಸಿಪಾಲ್​ ಮತ್ತು ಅತಿಥಿ ಉಪನ್ಯಾಸಕನ ವಿರುದ್ಧ ಆ ಶಾಲೆಯ ಹಲವು ಹೆಣ್ಣುಮಕ್ಕಳು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮೇಲೆ ದೌರ್ಜನ್ಯ ಎಸಗಲಾಗಿದೆ ಮತ್ತು ನಮ್ಮನ್ನು ಹೊಡೆದಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ಉಲ್ಲೇಖಿಸಿದ್ದು, ಇದೀಗ ಪಾದ್ರಿ, ನನ್​, ಪ್ರಿನ್ಸಿಪಾಲ್ ಮತ್ತು ಅತಿಥಿ ಉಪನ್ಯಾಸಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದರಲ್ಲಿ 40 ವರ್ಷದ ಪ್ರಿನ್ಸಿಪಾಲ್​ ಮತ್ತು 35 ವರ್ಷದ ಅತಿಥಿ ಉಪನ್ಯಾಸಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಶಾಲೆಯ ಉಸ್ತುವಾರಿ ವಹಿಸಿರುವ ಪಾದ್ರಿ, ಹೆಣ್ಣುಮಕ್ಕಳು ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಹೇಳಿಕೊಂಡರೂ ಕಡೆಗಣಿಸಿದ್ದಾರೆ ಎಂಬ ಕಾರಣಕ್ಕೆ ಕೇಸ್​ ಹಾಕಲಾಗಿದೆ ಮತ್ತು ನನ್​ ವಿರುದ್ಧ ಮಕ್ಕಳಿಗೆ ಥಳಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಿನ್ಸಿಪಾಲ್​ ಒಬ್ಬರನ್ನು ಬಂಧಿಸಲಾಗಿದೆ ಎಂದು ಡಿಂಡೋರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: Grama Vastavya: ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆ ಇದ್ದಂತೆ, ಕಾಡಿನ ಜನರ ಜೀವನ ನೋಡಿದರೆ ಕಣ್ಣೀರು ಬರುತ್ತೆ: ಆರ್.‌ ಅಶೋಕ್‌

ಈ ಶಾಲೆ ಜುನ್​ವಾನಿ ಎಂಬಲ್ಲಿದೆ. ಇದು ಡಿಂಡೋರಿ ಜಿಲ್ಲಾ ಕಚೇರಿಯಿಂದ 60 ಕಿಮೀ ದೂರದಲ್ಲಿದೆ. ರೋಮನ್​ ಕ್ಯಾಥೋಲಿಕ್​ ಕಮ್ಯೂನಿಟಿಯ ಜಬಲ್ಪುರ್ ಡಯೋಸಿಸನ್ ಎಜುಕೇಶನ್ ಸೊಸೈಟಿ ಈ ಶಾಲೆಯನ್ನು ನಡೆಸುತ್ತಿದೆ. ವಿದ್ಯಾರ್ಥಿನಿಯರ ದೂರಿನ ಬೆನ್ನಲ್ಲೇ ಇಲ್ಲಿಗೆ ಮಧ್ಯಪ್ರದೇಶ ಮಕ್ಕಳ ರಕ್ಷಣಾ ಇಲಾಖೆ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.

Exit mobile version