ಗುಜರಾತ್ ವಿಧಾನಸಭೆ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದ್ದು, ಈ ಮಧ್ಯೆ ವನ್ಸ್ಡಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯುಷ್ ಪಟೇಲ್ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದು ವರದಿಯಾಗಿದೆ. ಪಿಯುಷ್ ಪಟೇಲ್ ಅವರು ಇಂದು ವನ್ಸ್ಡಾದ ಝಾರಿ ಗ್ರಾಮದಲ್ಲಿ ಇದ್ದಾಗ, ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಅವರು ಪ್ರಯಾಣ ಮಾಡುತ್ತಿದ್ದ ಕಾರನ್ನು ಧ್ವಂಸ ಗೊಳಿಸಿ, ಬಳಿಕ ಪಿಯುಷ್ಗೆ ಥಳಿಸಿದ್ದಾರೆ. ಘಟನೆಯಲ್ಲಿ ಪಿಯುಷ್ ಪಟೇಲ್ ಗಾಯಗೊಂಡಿದ್ದಾರೆ.
ಪಿಯುಷ್ ಪಟೇಲ್ ಮೇಲೆ ದಾಳಿ ನಡೆಸಿದವರು ಕಾಂಗ್ರೆಸ್ ಅಭ್ಯರ್ಥಿ ಅನಂತ್ ಪಟೇಲ್ ಅವರ ಬೆಂಬಲಿಗರು ಎಂದು ಬಿಜೆಪಿ ಆರೋಪ ಮಾಡಿದೆ. ಅವರು ಬೇರೆ ಯಾವುದೇ ದುಷ್ಕರ್ಮಿಗಳು ಅಲ್ಲ, ಕಾಂಗ್ರೆಸ್ಸಿಗರದ್ದೇ ಕೆಲಸ ಎಂದು ಹೇಳಿದೆ. ಪಿಯುಷ್ ಪಟೇಲ್ ಬೆಂಬಲಿಗರು ವನ್ಸ್ಡಾ ಪೊಲೀಸ್ ಸ್ಟೇಶನ್ ಬಳಿ ಹೋಗಿ, ಗಲಾಟೆ ಮಾಡಿದ್ದಲ್ಲದೆ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗುಜರಾತ್ ವಿಧಾನಸಭೆಯ 182 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಇಂದು (ಡಿ.1) ಪ್ರಾರಂಭವಾಗಿದೆ. ಹಾಗೇ, ಡಿ.5ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.8ಕ್ಕೆ ಮತ ಎಣಿಕೆಯಾಗಲಿದೆ. ಅಂದಹಾಗೇ, ಈ ವನ್ಸ್ಡಾ ವಿಧಾನಸಭಾ ಕ್ಷೇತ್ರ ನವಸ್ರಿ ಜಿಲ್ಲೆಯಲ್ಲಿದ್ದು, ಈ ಸೀಟ್ನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ಇದನ್ನೂ ಓದಿ: Gujarat Election | ಗುಜರಾತ್‌ನಲ್ಲಿ ಇಂದು ಮೊದಲ ಹಂತದ ಮತದಾನ, ಹೇಗಿದೆ ಚುನಾವಣೆ ಹವಾಮಾನ?