ನವದೆಹಲಿ: ಮಹಾರಾಷ್ಟ್ರದಲ್ಲಿ ಟಿಪ್ಪು ಸುಲ್ತಾನ ಹಾಗೂ ಔರಂಗಜೇಬ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ, ಅವರನ್ನು ವೈಭವೀಕರಿಸಿದ್ದಕ್ಕೆ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ದೆಹಲಿಯಲ್ಲಿರುವ ಔರಂಗಜೇಬ್ ಲೇನ್ (Aurangzeb Lane) ಎಂಬ ರಸ್ತೆಯ ಹೆಸರನ್ನು ಬದಲಾಯಿಸಲಾಗಿದೆ. ಔರಂಗಜೇಬ್ ಲೇನ್‌ಗೆ ಮಾಜಿ ರಾಷ್ಟ್ರಪತಿ, ದೇಶ ಕಂಡ ಮಹಾನ್ ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಲೇನ್ ಎಂದು ಹೆಸರಿಡಲಾಗಿದೆ.
ದೆಹಲಿಯ ಲುಟೆನ್ಸ್‌ನಲ್ಲಿರುವ ಔರಂಗಜೇಬ್ ಲೇನ್‌ಅನ್ನು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಲೇನ್ ಎಂಬುದಾಗಿ ಹೆಸರಿಡಲು ನ್ಯೂಡೆಲ್ಲಿ ಮುನ್ಸಿಪಲ್ ಕೌನ್ಸಿಲ್ (NDMC) 2015ರಲ್ಲಿಯೇ ತೀರ್ಮಾನಿಸಿತ್ತು. ಈಗ ಆ ಹೆಸರನ್ನು ಬದಲಾಯಿಸಲು ಅನುಮೋದನೆ ನೀಡಿದೆ. ಎನ್‌ಡಿಎಂಸಿ ಸದಸ್ಯರೊಂದಿಗೆ ಚರ್ಚಿಸಿ, ಸರ್ವಾನುಮತದಿಂದ ಹೆಸರು ಬದಲಾಯಿಸಲು ತೀರ್ಮಾನಿಸಲಾಗಿದೆ.
ಮರುನಾಮಕರಣದ ಮಾಹಿತಿ ನೀಡಿದ ಎನ್‌ಡಿಎಂಸಿ ಉಪಾಧ್ಯಕ್ಷ
#WATCH | Satish Upadhyay, Vice Chairman, NDMC, says "Aurangzeb Lane has been renamed as Dr APJ Abdul Kalam Lane. Aurangzeb tried to destroy the Indian culture so there should not be any road in the name of Aurangzeb" pic.twitter.com/WvPH8Eteh5
— ANI (@ANI) June 29, 2023
1994ರ ಎನ್‌ಡಿಎಂಸಿ ಕಾಯ್ದೆಯ ಸೆಕ್ಷನ್ 231ರ ಉಪ ಸೆಕ್ಷನ್ (1) (A)ನಲ್ಲಿರುವ ನಿಯಮಗಳಂತೆ ಔರಂಗಜೇಬ್ ಲೇನ್‌ಅನ್ನು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಲೇನ್ ಎಂಬುದಾಗಿ ಬದಲಾಯಿಸಲು ಎನ್‌ಡಿಎಂಸಿಯ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ, ಮರುನಾಮಕರಣ ಮಾಡಲಾಗಿದೆ” ಎಂದು ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಮಾಹಿತಿ ನೀಡಿದರು.
“ಜನರ ಭಾವನೆಗಳನ್ನು ಗುರುತಿಸಿ ದೇಶದ ಕಂಡ ಮಹಾನ್ ವ್ಯಕ್ತಿಗಳ ಹೆಸರುಗಳನ್ನು ರಸ್ತೆಗಳು, ಗಲ್ಲಿಗಳು ಹಾಗೂ ಸಂಸ್ಥೆಗಳಿಗೆ ಇಡಲಾಗುತ್ತಿದೆ. ಇದರಿಂದ ಪೀಳಿಗೆಗಳಿಗೆ ಮಹನೀಯರ ಮಹತ್ವ, ಅವರ ಜೀವನ ಮತ್ತು ಸಾಧನೆ ತಿಳಿಯುತ್ತದೆ. ಇದೇ ಕಾರಣಕ್ಕಾಗಿ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿಡಲಾಗಿದೆ” ಎಂದು ವಿವರಿಸಿದರು.
ಇದನ್ನೂ ಓದಿ: Veer Savarkar: ಉತ್ತರ ಪ್ರದೇಶ ಆಯ್ತು, ಈಗ ಮಧ್ಯಪ್ರದೇಶ ಪಠ್ಯಪುಸ್ತಕದಲ್ಲೂ ಸಾವರ್ಕರ್ ಚಾಪ್ಟರ್ ಬಂತು
ಮುಂಬಯಿಯ ವರ್ಸೋವಾ-ಬಾಂದ್ರಾ ಸಮುದ್ರ ಸಂಪರ್ಕ ಸೇತುವೆಗೆ, ವೀರ ಸಾವರ್ಕರ್ ಸೇತು ಎಂದು ಮಹಾರಾಷ್ಟ್ರ ಸರ್ಕಾರ ಮರುನಾಮಕರಣ ಮಾಡಿದೆ. ವರ್ಸೋವಾ-ಬಾಂದ್ರಾ ಸೀ ಲಿಂಕ್ಗೆ ವೀರ ಸಾವರ್ಕರ್ ಹೆಸರು ಇಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮೇ 28ರಂದು, ವೀರ ಸಾವರ್ಕರ್ ಜಯಂತಿಯಂದು ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರ ಕೂಡ ವಸಾಹತುಶಾಹಿ ಕಾಲದ ಹೆಸರುಗಳನ್ನು ಬದಲಾಯಿಸಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ