ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿರುವ ಗುಲ್ಮರ್ಗ್ ಸ್ಕೈಯಿಂಗ್ ರೆಸಾರ್ಟ್‌ನಲ್ಲಿ ಬುಧವಾರ ಹಿಮಪಾತ (Massive Avalanche) ಉಂಟಾಗಿದೆ. ಸ್ಥಳದಲ್ಲಿ ಇಬ್ಬರು ವಿದೇಶಿ ಪ್ರವಾಸಿಗರ ದೇಹಗಳು ಸಿಕ್ಕಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Avalanche | ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ; ಒಬ್ಬ ಬಲಿ, ಇಬ್ಬರು ನಾಪತ್ತೆ
ರೆಸಾರ್ಟ್‌ನ ಅಫರ್ವತ್ ಶಿಖರ ಹಪತ್ ಖುದ್ ಸ್ಥಳದಲ್ಲಿ ಹಿಮಪಾತ ಉಂಟಾಗಿದೆ. ಸ್ಥಳಕ್ಕೆ ಬರಮುಲ್ಲಾ ಪೊಲೀಸರು ಬಂದಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರೊಂದಿಗೆ ಹಲವು ಏಜೆನ್ಸಿಗಳು ಕೂಡ ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಿವೆ.
ಹಿಮದಡಿ ಸಿಲುಕಿದ್ದ 19 ವಿದೇಶಿ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಅದನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ಈ ಹಿಂದೆ ಜನವರಿ 29ರಂದು ಲಡಾಖ್‌ನ ಕಾರ್ಗಿಲ್‌ನಲ್ಲಿ ಹಿಮಪಾತ ಸಂಭವಿಸಿದ್ದು, ಓರ್ವ ಮಹಿಳೆ ಮತು ಬಾಲಕಿ ಸಾವನ್ನಪ್ಪಿದ್ದರು.