ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯನ್ನು (Ayodhya) ವಿಶ್ವ ದರ್ಜೆಯ ನಗರವನ್ನಾಗಿ ಮಾಡುವುದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕನಸಾಗಿದೆ. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ರಾಮ ಮಂದಿರದಿಂದಾಗಿ ಅತ್ಯುನ್ನತ ಪ್ರವಾಸಿ ತಾಣವಾಗಲಿರುವ ಅಯೋಧ್ಯೆಗೆ ಹಲವು ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಿಗೆ ರಾಮಾಯಣದ ಪಾತ್ರಗಳ ಹೆಸರನ್ನು ಇಡುವುದಕ್ಕೆ ನಿರ್ಧರಿಸಲಾಗಿದೆ.
ಇದನ್ನೂ ಓದಿ: Ram mandir | ಅಯೋಧ್ಯೆಯ ರಾಮ ಮಂದಿರದಲ್ಲಿ 2024 ಜನವರಿ 14ರ ಮಕರ ಸಂಕ್ರಾಂತಿಗೆ ಶ್ರೀರಾಮ ವಿರಾಜಮಾನ
ಲಕ್ನೋ ಮಾರ್ಗದಿಂದ ಬರುವವರಿಗೆ ಮಾಡಲಾಗುತ್ತಿರುವ ಪ್ರವೇಶ ದ್ವಾರಕ್ಕೆ “ಶ್ರೀ ರಾಮ ದ್ವಾರ” ಎನ್ನುವ ಹೆಸರಿಡಲಾಗುವುದು. ಹಾಗೆಯೇ ಗೋರಖ್‌ಪುರದಿಂದ ಬರುವವರಿಗೆ ಮಾಡಲಾಗುತ್ತಿರುವ ದ್ವಾರಕ್ಕೆ “ಹನುಮ ದ್ವಾರ”, ಅಲಹಬಾದ್ ರಸ್ತೆಯ ದ್ವಾರಕ್ಕೆ “ಭರತ ದ್ವಾರ”, ಗೊಂಡಾ ರಸ್ತೆಯ ದ್ವಾರಕ್ಕೆ “ಲಕ್ಷ್ಮಣ ದ್ವಾರ”, ವಾರಾಣಸಿ ರಸ್ತೆಯ ದ್ವಾರಕ್ಕೆ “ಜಟಾಯು ದ್ವಾರ” ಹಾಗೂ ರಾಯ್‌ಬರೇಲಿ ರಸ್ತೆಯ ದ್ವಾರಕ್ಕೆ “ಗರುಡ ದ್ವಾರ” ಎಂದು ಹೆಸರಿಡಲಾಗುವುದು. ಈ ರೀತಿಯ ಹೆಸರನ್ನು ಇಡುವುದಕ್ಕೆ ಮುಖ್ಯಮಂತ್ರಿ ಯೋಗಿ ಅವರೇ ಸೂಚನೆ ನೀಡಿರುವುದಾಗಿ ಹೇಳಲಾಗಿದೆ.
ಈ ದ್ವಾರಗಳ ಬಳಿಯಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಕೊಡಲಾಗುವುದು. ದೊಡ್ಡದಾದ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನು ಈ ಎಲ್ಲ ದ್ವಾರಗಳ ಸಮೀಪದಲ್ಲಿಯೇ ನಿರ್ಮಿಸಿಕೊಡಲಾಗುವುದು.
ಇದನ್ನೂ ಓದಿ: Adiyogi Statue | ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಭವ್ಯ ʼಆದಿಯೋಗಿʼ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ