Site icon Vistara News

‘ನಾನು ಒಂದು ಸಲ ನಡುಗಿ ಹೋದೆ’; ಪ್ರಧಾನಿ ಮೋದಿ ಭೇಟಿ ಬಳಿಕ ಫೇಸ್​ಬುಕ್​ ಪೋಸ್ಟ್ ಹಾಕಿದ ಮಲಯಾಳಂ ನಟ ಉನ್ನಿ ಮುಕುಂದನ್​

Best 45 Minutes Of My Life Says Actor Unni Mukundan after Meet PM Modi in Kerala

#image_title

ತಿರುವನಂತಪುರ: ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Modi)ಯವರನ್ನು ಮಲಯಾಳಂ ನಟ ಉನ್ನಿ ಮುಕುಂದನ್ (Unni Mukundan)​ ಅವರು ಸೋಮವಾರ ಸಂಜೆ ಕೊಚ್ಚಿಯಲ್ಲಿ ಭೇಟಿಯಾಗಿ, ಅವರೊಂದಿಗೆ ಗುಜರಾತಿ ಭಾಷೆಯಲ್ಲೇ ಮಾತನಾಡಿದ್ದಾರೆ. ಪ್ರಧಾನಿ ಮೋದಿಯವರನ್ನು ಭೇಟಿಯಾಗುವುದು ನನ್ನ ಜೀವಮಾನದ ಕನಸಾಗಿತ್ತು. ಅದೀಗ ಈಡೇರಿದೆ ಎಂದು ಅವರು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಳೆದ ಈ 45 ನಿಮಿಷಗಳು, ನನ್ನ ಜೀವನದಲ್ಲಿಯೇ ಅತ್ಯುತ್ತಮ ಸಮಯ. ಈಗಲೂ ನನ್ನ ಆ ಉದ್ವೇಗದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ’ ಎಂದೂ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾದ ಬಳಿಕ ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿಕೊಂಡ ಉನ್ನಿ ಮುಕುಂದನ್ ಅವರು ‘ನಾನೀಗ ಹಾಕಿರುವುದು ಒಂದು ಸಂಚಲನ ಮೂಡಿಸುವ ಪೋಸ್ಟ್​. 14ವರ್ಷದಲ್ಲಿದ್ದಾಗ ನಿಮ್ಮನ್ನು ನೋಡಿದ್ದೆ. ಆಗಿನಿಂದಲೂ ಭೇಟಿಯಾಗುವ ಕನಸು ಇತ್ತು. ಅದೀಗ ನೆರವೇರಿದೆ. ‘ಹೇಗಿದ್ದೀಯಾ? ಸಹೋದರ’ ಎಂದು ನೀವು ಕೇಳಿದಾಗ ನಾನು ಅಕ್ಷರಶಃ ನಡುಗಿ ಹೋದೆ. ನಿಮ್ಮನ್ನು ಭೇಟಿಯಾಗಿದ್ದು ಮತ್ತು ಗುಜರಾತಿ ಭಾಷೆಯಲ್ಲಿ ನಿಮ್ಮೊಂದಿಗೆ ಮಾತನಾಡಿದ್ದು ನನಗೆ ಅತ್ಯಂತ ಖುಷಿ ಕೊಟ್ಟಿತು. ಇಡೀ ಜೀವನದಲ್ಲಿ ನಾನು ನಿಮ್ಮೊಂದಿಗೆ ಕಳೆದ 45 ನಿಮಿಷಗಳೇ ನನ್ನ ಜೀವನದ ಅತ್ಯುತ್ತಮ ಸಮಯ. ನೀವು ನನಗೆ ಹೇಳಿದ ಮಾತುಗಳನ್ನು, ಕೊಟ್ಟ ಸಲಹೆಗಳನ್ನು ನಾನು ಪ್ರಯೋಗಕ್ಕೆ ತರುತ್ತೇನೆ ಮತ್ತು ಅನುಷ್ಠಾನಕ್ಕೆ ತರುತ್ತೇನೆ’ ಎಂದು ಹೇಳಿದ್ದಾರೆ. ಹಾಗೇ, ಪಿಎಂಒ ಕಚೇರಿಯ ಟ್ವಿಟರ್ ಅಕೌಂಟ್​ನ್ನು ಟ್ಯಾಗ್ ಮಾಡಿದ್ದಾರೆ. ಉನ್ನಿ ಮುಕುಂದನ್​ ಪೋಸ್ಟ್​ಗೆ ಅನೇಕಾನೇಕರು ಲೈಕ್ಸ್​ ಕೊಟ್ಟು, ಕಮೆಂಟ್ ಮಾಡುತ್ತಿದ್ದಾರೆ. ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Vande Bharat Express: ಕೇರಳದಲ್ಲಿ ಇಂದು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ; ದೇಶದ 11ನೇ ಟ್ರೇನ್​ ಇದು

ಉನ್ನಿ ಮುಕುಂದನ್​ ಅವರು ಮಲಯಾಳಂ ಚಿತ್ರರಂಗದಲ್ಲಿ ಖ್ಯಾತ ನಟ. ಅವರ ಇತ್ತೀಚಿಗಿನ ಮಲಿಕಾಪ್ಪುರಂ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್​ ಆಗಿತ್ತು. ಇದರಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರು. ಹಾಗೇ, ಕಳೆದ ವರ್ಷ ಬಿಡುಗಡೆಯಾದ ಸಮಂತಾ ರುತ್​ ಪ್ರಭು ಅಭಿನಯದ ಯಶೋದಾ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು. ಅದರಲ್ಲಿ ಸಮಂತಾ ಬಾಡಿಗೆ ತಾಯಿಯಾಗಿದ್ದಳು. ಇದೂ ಬಾಕ್ಸ್​ ಆಫೀಸ್​​ನಲ್ಲಿ ಹಿಟ್ ಆಗಿತ್ತು.

Exit mobile version