Site icon Vistara News

Nasal Vaccine | ಕೊರೊನಾ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; ಮೂಗಿನ ಮೂಲಕ ನೀಡುವ ಲಸಿಕೆಗೆ ಅನುಮತಿ

Bharat Biotech's Nasal Vaccine Gets approves

ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಮತ್ತೊಂದು ಬಲ ಸಿಕ್ಕಿದೆ. ಭಾರತ್​ ಬಯೋಟೆಕ್​ ಸಂಸ್ಥೆ ಅಭಿವೃದ್ಧಿ ಪಡಿಸಿರುವ, ಮೂಗಿನ ಮೂಲಕ ನೀಡುವ ಲಸಿಕೆಗೆ (Chimpanzee Adenovirus Vectored Nasal Vaccine-ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ಡ್) ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಅನುಮೋದನೆ ನೀಡಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದು ‘ಭಾರತ್​ ಬಯೋಟೆಕ್​​ನ ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ಡ್ ಮರುಸಂಯೋಜಿತ ಕೊವಿಡ್​ 19 ಲಸಿಕೆಗೆ CDSCO ಅನುಮೋದನೆ ನೀಡಿದೆ. ಇದೊಂದು ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆ ಮಾಡಬಹುದಾಗಿದೆ’ ಎಂದು ಹೇಳಿದ್ದಾರೆ.

ಭಾರತ್​ ಬಯೋಟೆಕ್​ ಈಗಾಗಲೇ ಕೊರೊನಾ ವಿರುದ್ಧ ಕೊವ್ಯಾಕ್ಸಿನ್​ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕಳೆದ ವರ್ಷ ಜನವರಿಯಿಂದಲೂ ದೇಶದೆಲ್ಲೆಡೆ ಕೊವ್ಯಾಕ್ಸಿನ್​ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಅದು ಇಂಜೆಕ್ಷನ್​ ಟ್ಯೂಬ್​​ನಲ್ಲಿ ಕೈಯಿಗೆ ನೀಡುವ ಲಸಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಇಂಟ್ರಾನೇಸಲ್​ ಲಸಿಕೆ (BBV154) ಅಭಿವೃದ್ಧಿ ಪಡಿಸಲಾಗಿದ್ದು, ಅದನ್ನು ಮೂಗಿನ ಮೂಲಕ ಕೊಡಲಾಗುತ್ತದೆ.

ಕೊವಿಡ್ 19 ಇಂಟ್ರಾನೇಸಲ್​ ಕೊವಿಡ್ 19 ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗ ಕಳೆದ ತಿಂಗಳು ಮುಗಿದಿತ್ತು. ತಾವು ಈ ಲಸಿಕೆಯ ಪ್ರಾಥಮಿಕ ಡೋಸ್​ ಮತ್ತು ಬೂಸ್ಟರ್​ ಡೋಸ್​ಗೆ ಸಂಬಂಧಪಟ್ಟು ಪ್ರತ್ಯೇಕ ಪ್ರಯೋಗಗಳನ್ನು ನಡೆಸಿದ್ದಾಗಿ ಭಾರತ್​ ಬಯೋಟೆಕ್​ ಹೇಳಿಕೊಂಡಿದೆ. ಈ ನೇಸಲ್​ ಲಸಿಕೆ ಸುರಕ್ಷಿತವಾಗಿದೆ ಎಂದು ಎಲ್ಲ ಹಂತದಲ್ಲೂ ಸಾಬೀತಾಗಿದೆ. ಪ್ರಯೋಗ ಫಲಿತಾಂಶದ ವರದಿಗಳು, ದಾಖಲೆಯನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿ, ಅನುಮತಿಗೆ ಮನವಿ ಮಾಡಲಾಗಿದೆ ಎಂದೂ ಕಂಪನಿ ತಿಳಿಸಿತ್ತು.

ಇದನ್ನೂ ಓದಿ: Anocovax: ಭಾರತದಲ್ಲಿ ಪ್ರಾಣಿಗಳಿಗೂ ಬಂತು ಕೊವಿಡ್‌ 19 ಲಸಿಕೆ; ಕೃಷಿ ಸಚಿವರಿಂದ ಬಿಡುಗಡೆ

Exit mobile version