ಲುಧಿಯಾನ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ (Bharath Jodo Yatra) ಬುಧವಾರ ಪಂಜಾಬ್ ಪ್ರವೇಶಿಸಿದೆ. ಗುರುವಾರದಂದು ರಾಹುಲ್ ಗಾಂಧಿ ಹಾಗೂ ಹಲವು ನಾಯಕರು ಲುಧಿಯಾನದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಇದೇ ವೇಳೆ 1984ರ ಸಿಖ್ ವಿರೋಧಿ ಧಂಗೆಯ ಸಂತ್ರಸ್ತ ಕುಟುಂಬಗಳು ಪ್ರತಿಭಟನೆ ನಡೆಸಿವೆ. “ರಾಹುಲ್ ಗಾಂಧಿ ವಾಪಸ್ ಹೋಗಿ” ಎಂದು ಘೋಷಣೆ ಕೂಗಿವೆ.
ಇದನ್ನೂ ಓದಿ: Bharat Jodo Yatra | ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ 21 ಪಕ್ಷಗಳಿಗೆ ಆಹ್ವಾನ, ಜೆಡಿಎಸ್‌ಗಿಲ್ಲ ಆಮಂತ್ರಣ
ಲುಧಿಯಾನದಲ್ಲಿ ಸಿಖ್ ವಿರೋಧಿ ಧಂಗೆಯ ಸಂತ್ರಸ್ತರ ಸುಮಾರು ಹತ್ತು ಸಾವಿರ ಮನೆಗಳಿವೆ. ಅವುಗಳಲ್ಲಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಗಿದ್ದು, ಅಲ್ಲಿ ರಾಹುಲ್ ಗಾಂಧಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿದೆ.
ಸಿಖ್ ವಿರೋಧಿ ಧಂಗೆ ಸಂತ್ರಸ್ತ ಕುಟುಂಬಗಳ ಬೆಂಬಲಕ್ಕೆ ನಿಂತಿರುವ ದಂಗಾ ಪೀರಿತ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾಗಿರುವ ಸುರ್ಜಿತ್ ಸಿಂಗ್ ಈ ಪ್ರತಿಭಟನೆಯ ಬಗ್ಗೆ ಮಾತನಾಡಿದ್ದಾರೆ. “ಗುರು ಜ್ಞಾನ ವಿಹಾರದಲ್ಲಿರುವ ನಮ್ಮ ಮನೆಗೆ ಬೆಳಗ್ಗೆ ನಾಲ್ಕು ಗಂಟೆಗೇ ಪೊಲೀಸರು ಬಂದಿದ್ದರು. ಆಗಲೇ ನನ್ನನ್ನು ಗೃಹಬಂಧನ ಮಾಡಿದರು. ಭಾರತ್ ಜೋಡೋ ಯಾತ್ರೆ ಲುಧಿಯಾನದಲ್ಲಿ ಇರುವುದರಿಂದಾಗಿ ನೀವು ಇಂದು ಪ್ರತಿಭಟನೆ ಮಾಡುವಂತಿಲ್ಲ ಎಂದು ಎಚ್ಚರಿಸಿದರು. ಆದರೆ ನಾವು ಪೊಲೀಸ್ ಆಯುಕ್ತರಾದ ಮನ್ದೀಪ್ ಸಿಂಗ್ ಅವರ ಬಳಿ ಪ್ರತಿಭಟನೆಗೆ ಅನುಮತಿ ಕೇಳಿದ್ದೆವು. ಅವರು ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ಕೊಟ್ಟಿದ್ದರು. ಹಾಗಾಗಿ ನಾವು ಅಲ್ಲಿ ಪ್ರತಿಭಟನೆ ನಡೆಸಿದ್ದೇವೆ” ಎಂದಿದ್ದಾರೆ ಸುರ್ಜಿತ್.
ಇದನ್ನೂ ಓದಿ: Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು
“ಢಿಂಗ್ರಾ ಸಮಿತಿಯ ವರದಿಯನ್ನು ತಕ್ಷಣವೇ ಜಾರಿಗೆ ತರಬೇಕು. ಹಾಗೆಯೇ ದಂಗೆಗೆ ಮುಖ್ಯ ಕಾರಣವಾಗಿದ್ದ ಸಜ್ಜನ್ ಕುಮಾರ್ ಮತ್ತು ಕಮಲನಾಥ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.