ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಆಸ್ತಿಯನ್ನು ಕಳೆದ ವಾರ ಪ್ರಕಟಿಸಿದ್ದಾರೆ. ವಿಶೇಷ ಎಂದರೆ, ಸಿಎಂ ಅವರಗಿಂತ ಅವರ ಸಂಪುಟದ ಸಚಿವರೆಲ್ಲರೂ ಶ್ರೀಮಂತರಾಗಿದ್ದಾರೆ. ನಿತೀಶ್ ಕುಮಾರ್ ಅವರ ಆಸ್ತಿ ಮೌಲ್ಯವು, ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 75.53 ಲಕ್ಷ ರೂ. ಇದೆ!
ನಿತೀಶ್ ಕುಮಾರ್ ಬಳಿಕ ಒಟ್ಟು 16.68 ಲಕ್ಷ ರೂ. ಮೌಲ್ಯದ ಚರಾಸ್ತಿ ಇದ್ದರೆ, 58.85 ಲಕ್ಷ ರೂ. ಮೌಲ್ಯ ಸ್ಥಿರಾಸ್ತಿ ಇದೆ. ಆದರೆ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಅವರ ಸಂಪುಟದ ಎಲ್ಲ ಸಚಿವರು ಶ್ರೀಮಂತರಾಗಿದ್ದಾರೆ. ನಿತೀಶ್ ಜತೆಗೆ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಸೇರಿದಂತೆ 11 ಸಚಿವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಜೆಡಿಯು ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ನಿತೀಶ್ ಕುಮಾರ್ ಅವರು, ಬ್ಯಾಂಕಿನಲ್ಲಿ 50 ಸಾವಿರ ಹಣವಿದ್ದರೆ, ಕೈಯಲ್ಲಿ 28,135 ರೂ. ಇದೆ. ಅದೇ ರೀತಿ, 1 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣವಿದೆ. ಜತೆಗೆ, 12 ಹಸು ಮತ್ತು 10 ಕರುಗಳಿವೆ.
ಇದನ್ನೂ ಓದಿ | Nitish Kumar | ಹೆಂಗಸರು ಅಶಿಕ್ಷಿತರು, ಗಂಡಸರು ಸುಮ್ಮನಿರಲ್ಲ, ಹೀಗಾದ್ರೆ ಜನಸಂಖ್ಯೆ ನಿಯಂತ್ರಣ ಆಗಲ್ಲ: ನಿತೀಶ್ ಕುಮಾರ್