Site icon Vistara News

Nitish Kumar | ಬಿಜೆಪಿ 50 ಸೀಟಿಗೆ ಕುಸಿಯುವ ಕುರಿತು ಮಾತನಾಡೇ ಇಲ್ಲ, ನಿತೀಶ್‌ ಕುಮಾರ್‌ ಯುಟರ್ನ್!

Nitish Kumar on Bihar Hooch Tragedy

ಪಟನಾ: ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿರುವ ನಿತೀಶ್‌ ಕುಮಾರ್‌ (Nitish Kumar) ಅವರು ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡುತ್ತ, “ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 50ಕ್ಕಿಂತ ಹೆಚ್ಚಿನ ಸೀಟು ಗೆಲ್ಲುವುದಿಲ್ಲ” ಎಂದಿದ್ದ ಮುಖ್ಯಮಂತ್ರಿ ಈಗ ಯುಟರ್ನ್‌ ತೆಗೆದುಕೊಂಡಿದ್ದಾರೆ.

“ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಇಷ್ಟೇ ಸೀಟು ಗೆಲ್ಲುತ್ತದೆ ಎಂದು ನಾನು ಹೇಳಿಲ್ಲ. ಪ್ರತಿಪಕ್ಷಗಳನ್ನು ಒಗ್ಗೂಡಿಸಿ, ನಾವು ಯಶಸ್ಸು ಸಾಧಿಸುವುದಷ್ಟೇ ನನ್ನ ಉದ್ದೇಶವಾಗಿದೆ. ಬಿಜೆಪಿ ಇಷ್ಟೇ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತದೆ ಎಂಬುದರ ಬಗ್ಗೆ ಮಾತೇ ಆಡಿಲ್ಲ” ಎಂದಿದ್ದಾರೆ.

ಶನಿವಾರ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಸಭೆಯಲ್ಲಿ ನಿತೀಶ್‌ ಕುಮಾರ್‌ ಏನು ಹೇಳಿದ್ದಾರೆ ಎಂಬುದರ ಕುರಿತು ಜೆಡಿಯು ಪ್ರಕಟಣೆ ಹೊರಡಿಸಿತ್ತು. “ಪ್ರತಿಪಕ್ಷಗಳು ಒಗ್ಗೂಡಿದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 50ಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ ಎಂಬುದಾಗಿ ನಿತೀಶ್‌ ಹೇಳಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ | Nitish Kumar | ಮಣಿಪುರದಲ್ಲಿ ಬಿಜೆಪಿ ಜತೆ ಜೆಡಿಯು ವಿಲೀನ, ನಿತೀಶ್‌ ಕುಮಾರ್‌ಗೆ ಭಾರಿ ಹಿನ್ನಡೆ

Exit mobile version