Site icon Vistara News

Akasa Air | ಆಕಾಸ ಏರ್​​ ವಿಮಾನಕ್ಕೆ 1900 ಅಡಿ ಎತ್ತರದಲ್ಲಿ ಹಕ್ಕಿ ಡಿಕ್ಕಿ; ರೇಡೋಮ್​ ಮೇಲೆ ರಕ್ತದ ಕಲೆ

Bird hit to Akasa Air Flight

ನವ ದೆಹಲಿ: ಇತ್ತೀಚೆಗಷ್ಟೇ ನೂತನವಾಗಿ ಪ್ರಾರಂಭಗೊಂಡಿರುವ ದೆಹಲಿ ಮೂಲದ ಆಕಾಸ ಏರ್​ ಸಂಸ್ಥೆಯ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದೆ. ಇದರಿಂದಾಗಿ ವಿಮಾನದ ರೇಡೋಮ್​ (ವಿಮಾನದ ರಾಡಾರ್​ ಉಪಕರಣವನ್ನು ಕೆಟ್ಟ ವಾತಾವರಣದಿಂದ ಕಾಪಾಡುವ ರೇಡಿಯೊ ಗುಮ್ಮಟ)ಗೆ ಹಾನಿಯಾಗಿದೆ. ಅದರ ಮೇಲೆ ರಕ್ತದ ಕಲೆ ಕಾಣಿಸುತ್ತಿದ್ದು, ಹಕ್ಕಿ ಮೃತಪಟ್ಟಿದ್ದು ಖಚಿತವಾಗುತ್ತಿದೆ.

ಆಕಾಸ ಏರ್​​ನ ಬೋಯಿಂಗ್​ 737 ಮ್ಯಾಕ್ಸ್​ 8 ವಿಮಾನ ಅಹ್ಮದಾಬಾದ್​ನಿಂದ ಟೇಕ್​ಆಫ್​ ಆಗಿ ದೆಹಲಿಗೆ ಹೋಗುತ್ತಿತ್ತು. ಹಂತಹಂತವಾಗಿ ಮೇಲಕ್ಕೇರುತ್ತಿತ್ತು. ಹೀಗೆ ಸುಮಾರು 1900 ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿದ್ದಾಗ ಅದ್ಯಾವುದೋ ದೊಡ್ಡ ಹಕ್ಕಿ ಡಿಕ್ಕಿ ಹೊಡೆದಿದೆ. ಈ ವಿಷಯವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ವೂ ದೃಢಪಡಿಸಿದೆ. ಹಾಗೇ, ಮತ್ತೇನೂ ಗಂಭೀರ ಹಾನಿಯಾಗಿಲ್ಲ. ಪ್ರಯಾಣಿಕರೂ ಸಮಸ್ಯೆ ಆಗಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: Akasa Air | ನೂತನ ಆಕಾಸ ಏರ್​​ ಡಾಟಾ ಹ್ಯಾಕ್​; ಪ್ರಯಾಣಿಕರ ಖಾಸಗಿ ವಿವರ ಸೋರಿಕೆ

Exit mobile version