Site icon Vistara News

BJP Foundation Day: ಪ್ರಜಾಪ್ರಭುತ್ವದ ಗರ್ಭದಿಂದ ಹುಟ್ಟಿದ ಪಕ್ಷ ಬಿಜೆಪಿ, 2024ರಲ್ಲಿ ನಮ್ಮ ಗೆಲುವು ನಿಶ್ಚಿತ: ಪ್ರಧಾನಿ ಮೋದಿ

BJP Born from the womb of Democracy Says PM Modi Ahead Of foundation day

#image_title

ಬಿಜೆಪಿ ಪಕ್ಷದ 44ನೇ ಸಂಸ್ಥಾಪನಾ ದಿನದ (BJP Foundation Day) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ, ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರಜಾಪ್ರಭುತ್ವವನ್ನು ಹೊಗಳಿದ ಪ್ರಧಾನಿ ಮೋದಿ ‘ಬಿಜೆಪಿ ಪಕ್ಷವು ಪ್ರಜಾಪ್ರಭುತ್ವದ ಗರ್ಭದಿಂದ ಹುಟ್ಟಿದೆ. ಪ್ರಜಾಪ್ರಭುತ್ವ ಎಂಬ ಅಮೃತದಿಂದ ಪೋಷಿಸಲ್ಪಟ್ಟಿದೆ. ಹಾಗೇ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗಟ್ಟಿಗೊಳಿಸಿದೆ, ಪವಿತ್ರಗೊಳಿಸಿದೆ’ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು, ಬಿಜೆಪಿಯ ಪಾಲಿಗೆ ಈ ರಾಷ್ಟ್ರ ಬಹಳ ಮುಖ್ಯ. ನಮ್ಮ ಪಕ್ಷವು ಕೌಟುಂಬಿಕ ರಾಜಕಾರಣವನ್ನು ಬೆಂಬಲಿಸುವುದಿಲ್ಲ’ ಎಂದೂ ತಿಳಿಸಿದರು.

‘ಈ ದೇಶದಲ್ಲಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು-ಸುವ್ಯವಸ್ಥೆಗೆ ಇರುವ ಸವಾಲುಗಳ ವಿರುದ್ಧ ಹೋರಾಡುವುದು ಬಿಜೆಪಿಯ ಗಟ್ಟಿ ನಿರ್ಧಾರ. ಇದಕ್ಕಾಗಿ ನಾವು ಭಗವಾನ್​ ಹನುಮಾನ್​​ನಿಂದ ಸ್ಫೂರ್ತಿ-ಶಕ್ತಿ ಪಡೆದಿದ್ದೇವೆ. ನಾವೂ ಕೂಡ ಹನುಮಾನ್​​ನಂಥೆ ಕೆಲವೊಮ್ಮೆ ಕಠಿಣವಾಗಬಹುದು. ಆದರೆ ಯಾವತ್ತೂ ದೇಶವೇ ನಮಗೆ ಮೊದಲು. ದೇಶದ ಒಳಿತಿಗಾಗಿ ಒಂದಷ್ಟು ನಿರ್ಧಾರ ತೆಗೆದುಕೊಳ್ಳುವಾಗ ಕಠಿಣ ಎನ್ನಿಸಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಮೂಲಕ, ಇಂದು ಹನುಮಾನ್​ ಜಯಂತಿ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ಆಂಜನೇಯನನ್ನು ಸ್ಮರಿಸಿದರು.

ಇದೇ ಸಮಯದಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಅದರಲ್ಲೂ ಕಾಂಗ್ರೆಸ್​ ನಾಯಕರು ‘ಮೋದಿ ನಿಮ್ಮ ಸಮಾಧಿ ಅಗೆಯಲ್ಪಡುತ್ತದೆ’ ಎಂದು ಕೂಗುವ ಘೋಷಣೆಯನ್ನು ಉಲ್ಲೇಖಿಸಿದ ಅವರು ‘ಪ್ರತಿಪಕ್ಷಗಳು ತೀವ್ರ ಹತಾಶೆಗೀಡಾಗಿದ್ದಾರೆ. ವಿರೋಧ ಪಕ್ಷಗಳು ಏನೇ ಮಾಡಿದರೂ, 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ’ ಎಂದು ಪ್ರಧಾನಿ ಹೇಳಿದರು. ‘ಮನಸಿನಲ್ಲಿ ವಿಷವನ್ನೇ ತುಂಬಿಕೊಂಡವರು ಸುಳ್ಳುಗಳನ್ನು ಬಿತ್ತರಿಸುತ್ತಿದ್ದಾರೆ. ಹತಾಶೆಗೆ ಒಳಗಾದವರು ಮೋದಿ ನಿಮ್ಮ ಸಮಾಧಿ ಅಗೆಯಲ್ಪಡುತ್ತದೆ ಎಂದು ಕೂಗುತ್ತಿದ್ದಾರಷ್ಟೇ’ ಎಂದೂ ತಿಳಿಸಿದರು.

ಇದನ್ನೂ ಓದಿ: Karnataka Election 2023: ವಲಸೆ ಹಕ್ಕಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ಕನ್ಫರ್ಮ್‌; ಗೋಪಾಲಯ್ಯ, ಸೋಮಶೇಖರ್‌ ಬಿಜೆಪಿಯಲ್ಲೇ ಖಾತ್ರಿ

ನಾವು ನಮ್ಮನ್ನು ಭಾರತ ಮಾತೆಗೆ, ಇಲ್ಲಿನ ಸಂವಿಧಾನಕ್ಕೆ ಮತ್ತು ಕೋಟ್ಯಂತರ ನಾಗರಿಕರಿಗೆ ಅರ್ಪಿಸಿಕೊಂಡಿದ್ದೇವೆ. ನಮ್ಮದು ದೊಡ್ಡ ಕನಸು ಇರುವ ರಾಜಕೀಯ ಸಂಸ್ಕೃತಿ. ಅದನ್ನು ನೆರವೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ನಾವು ಕಾಂಗ್ರೆಸ್ಸಿಗರಂತೆ ಅಲ್ಲ. ಮಹಿಳೆಯರ ಕಲ್ಯಾಣ ನಮ್ಮ ಆದ್ಯತೆ. ಮುಂದಿನ 25ವರ್ಷಗಳಿಗಾಗಿ ನಾವು ಗುರಿಯನ್ನು ಹೊಂದಿದ್ದೇವೆ. ಅದನ್ನು ಈಡೇರಿಸಿಕೊಳ್ಳಲು ನಮ್ಮ ಪಕ್ಷದ ಪಂಚಾಯಿತಿ ಮಟ್ಟದ ಕಾರ್ಯಕರ್ತರಿಂದ ಹಿಡಿದು, ಸಂಸತ್ತಿನ ಮಟ್ಟದ ಕಾರ್ಯಕರ್ತರವರೆಗೆ ಎಲ್ಲರಿಗೂ ಸೂಕ್ತ ತರಬೇತಿ ಕೊಡುತ್ತಿದ್ದೇವೆ’ ಎಂದು ಹೇಳಿದರು.

Exit mobile version