ನವ ದೆಹಲಿ: ಬಿಜೆಪಿ ನಾಯಕ (BJP Leader) ಕಿರೀಟ್ ಸೋಮಯ್ಯ (BJP leader Kirit Somaiya) ಅವರದ್ದು ಎನ್ನಲಾದ ಒಂದು ಸೆಕ್ಸ್ಚ ವಿಡಿಯೊವನ್ನು ಮಹಾರಾಷ್ಟ್ರದ ಮರಾಠಿ ನ್ಯೂಸ್ ಚಾನೆಲ್ ಪ್ರಸಾರ ಮಾಡಿದೆ. ಅದೀಗ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿದೆ. ಕಿರೀಟ್ ಸೋಮಯ್ಯನವರು ಯಾವುದೋ ಮಹಿಳೆಯೊಂದಿಗೆ ಸೆಕ್ಸ್ ಚಾಟ್ ನಡೆಸುತ್ತಿರುವ ವಿಡಿಯೊ ಇದಾಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ಕೂಡ ವೈರಲ್ ಆಗುತ್ತಿದೆ.
ಆದರೆ ಮಹಾರಾಷ್ಟ್ರ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ‘ನಾನು ಯಾವ ಮಹಿಳೆಯ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಈ ವಿಡಿಯೊ ನನ್ನದಲ್ಲ . ದಯವಿಟ್ಟು ವಿಡಿಯೊ ಬಗ್ಗೆ ತನಿಖೆಯಾಗಬೇಕು’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದಾರೆ. ಟ್ವೀಟ್ ಕೂಡ ಮಾಡಿರುವ ಅವರು ‘ನಾನು ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆ. ಇಂಥ ಇನ್ನೂ ಹಲವು ವಿಡಿಯೊಗಳು ಇವೆ, ನನ್ನ ವಿರುದ್ಧ ದೂರುಗಳು ದಾಖಲಾಗಿವೆ ಎಂದು ನ್ಯೂಸ್ ಚಾನೆಲ್ನಲ್ಲಿ ಪ್ರತಿಪಾದಿಸಲಾಗುತ್ತಿದೆ. ಆದರೆ ಇದು ಸುಳ್ಳು. ಈ ಆರೋಪದ ಬಗ್ಗೆ ತನಿಖೆಯಾಗಲಿ. ವಿಡಿಯೊಗಳನ್ನು ಪರಿಶೀಲನೆ ಮಾಡಬೇಕು ಎಂದು ಕಿರೀಟ್ ಸೋಮಯ್ಯ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ಮೇಲೆ ಗ್ಯಾಂಗ್‌ರೇಪ್, ಬಾಲಕಿಗೆ ಲೈಂಗಿಕ ಕಿರುಕುಳ; ಬಿಜೆಪಿ ನಾಯಕನ ಪುತ್ರನೇ ಆರೋಪಿ
ಮಹಾರಾಷ್ಟ್ರ ಬಿಜೆಪಿ ನಾಯಕ ಕಿರೀಟ್ ಸೋಮಯ್ಯನವರ ಈ ವಿಡಿಯೊ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಎನ್ಸಿಪಿ ಪಕ್ಷದ (ಶರದ್ ಪವಾರ್ ಬಣ)ವಿದ್ಯಾ ಚೌಹಾಣ್ ಪ್ರತಿಕ್ರಿಯೆ ನೀಡಿ ‘ಕಿರೀಟ್ ಸೋಮಯ್ಯ ವಿಡಿಯೊ ನೋಡಿ ಅಸಹ್ಯವಾಯಿತು. ಮಹಿಳೆಯೊಬ್ಬರಿಗೆ ಲೈಂಗಿಕ ಭಾಷೆಯಲ್ಲಿ ಬೈಯ್ಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಪ್ರತಿಕ್ರಿಯೆ ನೀಡಿ ‘ಬಿಜೆಪಿ ನಾಯಕರು ಪದೇಪದೆ ನೈತಿಕತೆಯ ಬಗ್ಗೆ ಉಪನ್ಯಾಸ ಕೊಡುತ್ತಾರೆ. ಆದರೆ ಇಂಥ ಕೆಲಸ ಮಾಡುತ್ತಾರೆ. ಸೂಕ್ತ ಕ್ರಮ ಜರುಗಿಸಿ’ ಎಂದು ಆಗ್ರಹಿಸಿದ್ದಾರೆ.