Site icon Vistara News

Sonali Phogat | ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್​ ಗೋವಾದಲ್ಲಿ ಸಾವು

Sonali Phogat

ಪಣಜಿ : ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ (Sonali Phogat)​ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸೋನಾಲಿ ತಮ್ಮ ಕಚೇರಿಯ ಕೆಲವು ಸಿಬ್ಬಂದಿಯೊಂದಿಗೆ ಗೋವಾಕ್ಕೆ ತೆರಳಿದ್ದರು. ಆಗಸ್ಟ್​ 22ರಂದೇ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸೋನಾಲಿ 2019ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅದಾಂಪುರದಿಂದ ಬಿಜೆಪಿ ಟಿಕೆಟ್​​ನಲ್ಲಿ ಸ್ಪರ್ಧಿಸಿದ್ದರು. ಆದರೆ ಆಗ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಕುಲದೀಪ್​ ಬಿಷ್ಣೋಯಿ ವಿರುದ್ಧ ಸೋತಿದ್ದರು. ಆದರೆ ಕುಲದೀಪ್​ ಇತ್ತೀಚೆಗೆ ಕಾಂಗ್ರೆಸ್​ಗೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಸೇರಿದ್ದಾರೆ.

ಸೋನಾಲಿ ಫೋಗಟ್​​ಗೆ 42 ವರ್ಷ. ಇವರು ನಟನೆ ಜತೆ, ಟಿಕ್​ಟಾಕ್​ ಸ್ಟಾರ್​ ಆಗಿಯೂ ಗುರುತಿಸಿಕೊಂಡಿದ್ದರು. ಸೋನಾಲಿ ಟಿಕ್​ಟಾಕ್​ ವಿಡಿಯೋಗಳೆಲ್ಲ ಈ ಹಿಂದೆ ಭರ್ಜರಿ ಫೇಮಸ್​ ಆಗಿದ್ದವು. 2021ರ ಜನವರಿಯಲ್ಲಿ ನಡೆದಿದ್ದ ಹಿಂದಿ ಬಿಗ್​ಬಾಸ್​ 14ನೇ ಸೀಸನ್​​ನಲ್ಲಿ ಇವರು ಪಾಲ್ಗೊಂಡಿದ್ದರು. ಅಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಹೇಳಿಕೊಂಡಿದ್ದರು. ‘ನನ್ನ ಪತಿ ಮೃತಪಟ್ಟ ಮೇಲೆ, ನಾನು ಒಬ್ಬಂಟಿಯಾಗಿದ್ದೆ. ಆದರೆ ನನ್ನ ಜೀವನದಲ್ಲಿ ಒಬ್ಬಾತ ಬಂದ. ಅವನಿಂದಾಗಿ ನನ್ನಲ್ಲಿ ಅನೇಕ ಬದಲಾವಣೆಗಳು ಆದವು. ಆದರೆ ಕೆಲವು ಕಾರಣಗಳಿಂದಾಗಿ ನಮ್ಮಿಬ್ಬರ ಸಂಬಂಧ ಮುಂದುವರಿಯಲಿಲ್ಲ’ ಎಂದು ತಿಳಿಸಿದ್ದರು. ಹಾಗೇ, ಅದೇ ಸೀಸನ್​​ನಲ್ಲಿ ಸ್ಪರ್ಧಿಯಾಗಿದ್ದ ಅಲಿ ಗೋನಿ ಮೇಲೆ ತನಗೆ ಲವ್​ ಆಗಿದೆ ಎಂದು ಬಹಿರಂಗವಾಗಿಯೂ ಹೇಳಿಕೊಂಡಿದ್ದರು.

ಸಾಯುವ ಕೆಲವೇ ಹೊತ್ತು ಮೊದಲು ಪೋಸ್ಟ್​
ಸೋನಾಲಿ ಆಗಸ್ಟ್​ 22ರ ರಾತ್ರಿ 9.25ರ ಹೊತ್ತಿಗೆ ತಮ್ಮ ಟ್ವಿಟರ್​ ಖಾತೆಯ ಪ್ರೊಫೈಲ್​ ಫೋಟೋ ಬದಲಿಸಿದ್ದರು. ಹಾಗೇ, ಇನ್​ಸ್ಟಾಗ್ರಾಂನಲ್ಲೂ ಕೂಡ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋಕ್ಕೆ ಅನೇಕರು ಕಮೆಂಟ್ಸ್​ ಮಾಡಿದ್ದಾರೆ. ಆದರೆ ಈಗ ಅವರ ಅದೇ ಫೋಟೋ, ವಿಡಿಯೋಕ್ಕೆ ‘RIP’ ಎಂದು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ದ್ರೌಪದಿ ಮುರ್ಮುಗೆ ಮತ ಹಾಕಿದ ಕಾಂಗ್ರೆಸ್‌, ಎನ್‌ಸಿಪಿ, ಎಸ್‌ಪಿ ಶಾಸಕರು ಇವರು; ಆತ್ಮಸಾಕ್ಷಿಯ ಆದೇಶವಂತೆ!

Exit mobile version