ಜಾರ್ಖಂಡ್: ರಾಜ್ಯದ ಪ್ರಮುಖ ನಾಯಕಿಯೊಬ್ಬರನ್ನು ಬಿಜೆಪಿ ಅಮಾನತು ಮಾಡಿದೆ. ಇವರ ಮನೆಯ ಕೆಲಸದವಳು ಪೊಲೀಸರಿಗೆ ದೂರುಕೊಟ್ಟ ಬೆನ್ನಲ್ಲೇ, ಬಿಜೆಪಿ ಕ್ರಮ ಕೈಗೊಂಡಿದೆ. ಅಂದಹಾಗೇ, ಅಮಾನತುಗೊಂಡ ಬಿಜೆಪಿ ನಾಯಕಿ ಸೀಮಾ ಪಾತ್ರಾ. ಇವರ ಮನೆಯ ಕೆಲಸದವಳ ಹೆಸರು ಸುನೀತಾ ಎಂದಾಗಿದ್ದು, ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆ.
ಸುಮಾರು ಎಂಟು ವರ್ಷಗಳಿಂದ ಸೀಮಾ ಪಾತ್ರಾ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಅವರು ನನಗೆ ಹಿಂಸೆ ನೀಡುತ್ತಿದ್ದಾರೆ. ಮನೆಯ ಟಾಯ್ಲೆಟ್ನ್ನು ನಾಲಿಗೆಯಿಂದ ನೆಕ್ಕಿ ಸ್ವಚ್ಛಗೊಳಿಸುವಂತೆ ಪೀಡಿಸುತ್ತಾರೆ. ಬಿಸಿ ನೀರು, ಬಿಸಿ ಪದಾರ್ಥಗಳನ್ನು ಮೈಮೇಲೆ ಹಾಕುತ್ತಾರೆ ಎಂದು ಸುನೀತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸೀಮಾ ಮಾಜಿ ಐಎಎಸ್ ಅಧಿಕಾರಿಯ ಪತ್ನಿ.
ಸೀಮಾ ಪುತ್ರನೇ ಕೆಲಸದವಳನ್ನು ಕಾಪಾಡಿದ
ಪ್ರತಿದಿನ ಸುನೀತಾಳಿಗೆ ತನ್ನ ಅಮ್ಮ ಸೀಮಾ ತೊಂದರೆ ಕೊಡುವುದನ್ನು ನೋಡಿದ ಆಕೆಯ ಪುತ್ರ ಆಯುಷ್ಮಾನ್ ಧೈರ್ಯದಿಂದ ಕೆಲಸದವಳನ್ನು ರಕ್ಷಿಸಿದ್ದಾನೆ. ತನ್ನ ಮನೆಯಲ್ಲಿ ಕೆಲಸದವಳಿಗೆ ಆಗುತ್ತಿರುವ ಅನ್ಯಾಯವನ್ನು ಸ್ನೇಹಿತ ವಿವೇಕ್ ಬಾಸ್ಕೆ ಎಂಬುವನಿಗೆ ಹೇಳಿದ್ದ. ನಂತರ ಇವರಿಬ್ಬರೂ ಸೇರಿ ಸುನೀತಾರಿಗೆ ಮುಂದಿನ ದಾರಿ ತೋರಿದ್ದಾರೆ. ಈ ಕೇಸ್ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಸೀಮಾ ಪಾತ್ರಾ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಆಗ್ರಹಿಸುತ್ತಿದೆ.
ಇದನ್ನೂ ಓದಿ: ಅಂಕಿತಾ ಸಿಂಗ್ ಬೆಡ್ರೂಮಿಗೇ ಹೋಗಿ ಬೆಂಕಿ ಹಚ್ಚಿದ ಶಾರುಖ್; ಆ ಕ್ಷಣ ವಿವರಿಸಿ ಕಣ್ಮುಚ್ಚಿದ ಯುವತಿ