Site icon Vistara News

Lucknow: ಲಖನೌ ನಗರವನ್ನು ಲಕ್ಷ್ಮಣಪುರ ಎಂದು ಮರುನಾಮಕರಣ ಮಾಡಲು ಪ್ರಧಾನಿಗೆ ಪತ್ರ ಬರೆದ ಬಿಜೆಪಿ ಸಂಸದ

BJP MP writes letter to PM to rename Lucknow city as Lakshmanpur

ನವದೆಹಲಿ: ಉತ್ತರ ಪ್ರದೇಶದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರ ಆವರಣದಲ್ಲಿ ಬೃಹತ್ ತಾಮ್ರದ ಶ್ರೀರಾಮನ ಸಹೋದರನಾಗಿರುವ ಲಕ್ಷ್ಮಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಶೀಘ್ರವೇ ಈ ಪ್ರತಿಮೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಇದರ ಮಧ್ಯೆಯೇ, ಪ್ರತಾಪಗಢ ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಅವರು, ಉತ್ತರ ಪ್ರದೇಶದ ರಾಜಧಾನಿ ಲಖನೌ (Lucknow) ನಗರವನ್ನು ಲಖನಪುರ್ ಅಥವಾ ಲಕ್ಷ್ಮಣಪುರ ಎಂದು ಮರುನಾಮಕರಣಕ್ಕೆ ಒತ್ತಾಯಿಸಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

ಲಖನೌ ನಗರದ ಹೆಸರನ್ನು ಬದಲಿಸಬೇಕೆಂಬ ಬೇಡಿಕೆ ಬಹುದಿನಗಳಿಂದಲೂ ಇದೆ. ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಲಹಾಬಾದ್ ಸೇರಿದಂತೆ ಹಲವು ನಗರಗಳಿಗೆ ನಾಮಕರಣ ಮಾಡಿದೆ. ಈಗ ಲಖನೌ ನಗರವನ್ನು ಲಖನ್‌ಪುರ್ ಅಥವಾ ಲಕ್ಷ್ಮಣಪುರ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ: Police Meta Agreement: ಇಬ್ಬರ ಜೀವ ಉಳಿಸಿದ ಉತ್ತರ ಪ್ರದೇಶ ಪೊಲೀಸರು, ಫೇಸ್‌ಬುಕ್‌ ನಡುವಿನ ಒಪ್ಪಂದ, ಹೇಗೆ ಅಂತೀರಾ?

ನಮ್ಮ ಪ್ರಾಚೀನ ನಂಬಿಕೆಗಳ ಪ್ರಕಾರ, ಶ್ರೀರಾಮನು ಲಖನೌ ನಗರವನ್ನು ಲಕ್ಷ್ಮಣನಿಗೆ ಕಾಣಿಕೆಯಾಗಿ ನೀಡಿದ್ದ. ಹಾಗಾಗಿ, ಈ ಪ್ರದೇಶಕ್ಕೆ ಲಖನ್‌ಪುರ ಅಥವಾ ಲಕ್ಷ್ಮಣಪುರ ಎಂದು ಕರೆಯಲಾಗುತ್ತಿತ್ತು. ಆಧರೆ, 18ನೇ ಶತಮಾನದಲ್ಲಿ ಆಗಿನ ನವಾಬ್ ಅಸಫ್ ಉದ್ ದೌಲಾ ಅವರು ಈ ನಗರವನ್ನು ಲಖನೌ ಎಂದು ಮರುನಾಮಕರಣ ಮಾಡಿದರು. ಅಂದಿನಿಂದ ಇದೇ ಹೆಸರಿನಿಂದ ಕರೆಯಲಾಗುತ್ತಿದೆ ಎಂದು ಸಂಸದರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Exit mobile version