Site icon Vistara News

Three Jamaai | ಬಿಜೆಪಿಯ ʼಮೂವರು ಅಳಿಯಂದಿರುʼ ಎಂದರೆ ಯಾರು? ತೇಜಸ್ವಿ ಯಾದವ್‌ ಟಾಂಗ್ ಕೊಟ್ಟಿದ್ದು ಏಕೆ?

Tejaswi

ಪಟನಾ: ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಮೈತ್ರಿ ಸರಕಾರದ ವಿಶ್ವಾಸಮತ ಸಾಬೀತಿನ ದಿನವೇ ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರ ಮಾಲ್‌ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಮಧ್ಯೆಯೂ ನಿತೀಶ್‌ ಕುಮಾರ್‌ ಅವರು ವಿಶ್ವಾಸಮತ ಸಾಬೀತುಪಡಿಸಿದ್ದು, ವಿಶ್ವಾಸಮತ ಗೆಲ್ಲುತ್ತಲೇ ಡಿಸಿಎಂ ತೇಜಸ್ವಿ ಯಾದವ್‌ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿಯು ಸಿಬಿಐ, ಇಡಿ ಹಾಗೂ ಐಟಿ ಎಂಬ ಮೂವರು ಅಳಿಯಂದಿರನ್ನು ಹೊಂದಿದ್ದಾರೆ. ಪ್ರತಿಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಿಗೆ ತನ್ನ ಅಳಿಯಂದಿರನ್ನು (Three Jamaai) ಕಳುಹಿಸುತ್ತದೆ” ಎಂದು ಟಾಂಗ್‌ ನೀಡಿದ್ದಾರೆ.

ಸಮಾಜವಾದದ ನೆಲಸಮವೇ ಬಿಜೆಪಿಯ ಉದ್ದೇಶವಾಗಿದೆ. ಸಮಾಜವಾದದ ಪ್ರತಿಪಾದನೆಗೆ ನನ್ನ ತಂದೆ ಲಾಲು ಪ್ರಸಾದ್‌, ತಾಯಿ ರಾಬ್ರಿ ದೇವಿ, ನನ್ನ ಸಹೋದರಿಯರು ಮತ್ತೆ ನಾನು ಕಷ್ಟ ಅನುಭವಿಸಿದ್ದೇವೆ. ಆದರೆ, ನಾನು ಮತ್ತು ಸಿಎಂ ನಿತೀಶ್‌ ಕುಮಾರ್‌ ಅವರು ಒಂದೇ ಸಿದ್ಧಾಂತ ಹೊಂದಿದ್ದೇವೆ. ಬಿಜೆಪಿಯವರು ಸಮಾಜವಾದಿಗಳಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

“ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ಇವುಗಳ ಮೂಲಕ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ. ಬಿಜೆಪಿಗೆ ಸಿಬಿಐ, ಇ.ಡಿ ಹಾಗೂ ಐಟಿ ಎಂದರೆ ಅಳಿಯಂದಿರ ರೀತಿ ಆಗಿವೆ. ಇವುಗಳನ್ನೇ ಬಿಜೆಪಿಯು ಗುರಾಣಿಯಾಗಿ ಬಳಸುತ್ತಿದೆ. ಆದರೆ, ಇದು ತುಂಬ ದಿನ ಫಲ ನೀಡುವುದಿಲ್ಲ” ಎಂದು ತಿಳಿಸಿದ್ದಾರೆ.‌

ಇದನ್ನೂ ಓದಿ | Tejaswi Yadav | ಬಿಹಾರದಲ್ಲಿ ಆರ್‌ಜೆಡಿ ಸಚಿವರಿಗೆ ತೇಜಸ್ವಿ ಯಾದವ್‌ ನೀಡಿದ ಆರು ಸೂಚನೆಗಳೇನು?

Exit mobile version